ವಿಟ್ಲ, ಫೆ 23 (DaijiworldNews/SM): ಬಾರ್ ಸಿಬ್ಬಂದಿ ಹಾಗೂ ಸಾರ್ವಜನಿಕರ ಜತೆಗೆ ಗಲಾಟೆಗೆ ಮುಂದಾದ ಗುಂಪೊಂದರ ಹಲವು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ವಿಟ್ಲದಲ್ಲಿ ಭಾನುವಾರ ನಡೆದಿದೆ.
ಬೊಬ್ಬೆಕೇರಿಯ ಬಾರ್ ಬಳಿಯಲ್ಲಿ ಬಾರ್ ನಲ್ಲಿ ಮದ್ಯ ಖರೀದಿಸಿ ಬಳಿಕ ಬಿಲ್ ಕೊಡದೆ ಸಿಬ್ಬಂದಿಗಳ ಹಾಗೂ ಸಾರ್ವಜನಿಕರ ಮೇಲೆ ಗುಂಪು ದಾಳಿಗೆ ಮುಂದಾಗಿದೆ. ಈ ಸಂದರ್ಭ ದಾಳಿಗೆ ಮುಂದಾದವರ ವಿರುದ್ಧ್ಹ ಬಾರ್ ಮಾಲಕರು ಠಾಣೆಗೆ ದೂರು ನೀಡಿದ್ದಾರೆ.
ಅದರಂತೆ ದೂರು ದಾಖಲಿಸಿಕೊಂಡ ಎಸ್ ಐ ವಿನೋದ್ ಎಸ್ ಅವರ ತಂಡ ತಕ್ಷಣ ಕಾರ್ಯ ಪ್ರವೃತ್ತರಾಗಿ ಎಲ್ಲಾ ಚೆಕ್ ಪೋಸ್ಟ್ ಗಳಲ್ಲೂ ತಪಾಸಣೆ ಆರಂಭಿಸಿದ್ದಾರೆ. ಹಾಗೂ ಸುಮಾರು 9 ಮಂದಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.