ಬಂಟ್ವಾಳ, ಫೆ 24 (DaijiworldNews/SM): ಟ್ರಾಪಿಕ್ ಪೋಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಇಬ್ಬರು ವ್ಯಕ್ತಿಗಳನ್ನು ಪೋಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಟ್ರಾಫಿಕ್ ಪೋಲೀಸರು ಕೈಕಂಬ ಸಮೀಪದ ಮೊಡಂಕಾಪು ಎಂಬಲ್ಲಿ ರಸ್ತೆ ಬದಿಯಲ್ಲಿ ವಾಹನಗಳ ತಪಾಸಣೆ ನಡೆಸಿ ರಸ್ತೆ ನಿಯಮಗಳನ್ನು ಪಾಲಿಸದ ಮತ್ತು ಟ್ರಾಫಿಕ್ ರೂಲ್ ಗಳನ್ನು ಪಾಲಿಸದ ವಾಹನ ಸವಾರರಿಗೆ ಕೇಸು ದಾಖಲಿಸುತ್ತಿದ್ದ ವೇಳೆ ಇಬ್ಬರು ವ್ಯಕ್ತಿಗಳು ಟ್ರಾಫಿಕ್ ಎಸ್.ಐ.ಸಹಿತ ಪೋಲೀಸ್ ಸಿಬ್ಬಂದಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿತ್ತು.
ಈ ಆಧಾರದಲ್ಲಿ ಬಂಟ್ವಾಳ ನಗರ ಪೋಲಿಸರು ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಟ್ರಾಫಿಕ್ ಪೋಲೀಸರಿಗೆ ಕಾನೂನಿನ ಪಾಠ ಹೇಳುವಂತಹ ವಿಡಿಯೋ ಜೊತೆಗೆ ಇಲ್ಲಿಂದ ತೆರಳಿ ಎಂದು ಹೇಳುವ ವಿಡಿಯೋ ವೈರಲ್ ಅಗಿದೆ. ಜೊತೆಗೆ ಕಾನೂನು ಪಾಲಿಸದ ಈ ಸವಾರರಿಗೆ ನೀಡಿದ ನೋಟೀಸ್ ಅನ್ನು ಹರಿದುಬಿಸಾಡುತ್ತೇನೆ ಎಂದು ಗದರಿಸಿರುವುದು ಕೂಡಾ ವಿಡಿಯೋದಲ್ಲಿ ದಾಖಲಾಗಿದೆ.
ಪೊಲೀಸ್ ಸಿಬ್ಬಂದಿಯವರು ಏಕವಚನದಲ್ಲಿ ಸವಾರರನ್ನು ಕರೆದಿದ್ದಾರೆ ಎಂದು ಹೇಳಿದ ಬಳಿಕ ನೀವು ಹಣ ಲೂಟಿ ಮಾಡುತ್ತಿದ್ದೀರಿ ಮಾಡುತ್ತಿದ್ದೀರಿ, ನೀವು ಇಲ್ಲಿಂದ ತೆರಳಿ, ನಿಮಗೆ ಅಧಿಕಾರ ನೀಡಿದವರು ಯಾರು ಎಂದು ಅವರು ಪೊಲೀಸರಿಗೆ ಪ್ರಶ್ನೆ ಮಾಡುವ ವಿಡಿಯೋ ವೈರಲ್ ಅಗಿದೆ.
ಇಂತಹ ಪ್ರಕರಣಗಳ ಬಗ್ಗೆ ಸೂಕ್ತವಾದ ಕಾನೂನು ಕ್ರಮಗಳನ್ನು ಇಲಾಖೆ ಕೈಗೊಳ್ಳದಿದ್ದರೆ, ಟ್ರಾಫಿಕ್ ಪೋಲೀಸರ ಕರ್ತವ್ಯಕ್ಕೆ ಇನ್ನಷ್ಟು ತೊಂದರೆ ಅಗಲಿದೆ. ಹಾಗಾಗಿ ಪೋಲೀಸರಿಗೆ ನೈತಿಕ ಬೆಂಬಲ ನೀಡಲು ಅಂತವರ ಮೇಲೆ ಕ್ರಮ ಕೈಗೊಳ್ಳಲು ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡುತ್ತಿದೆ.