ವಿಟ್ಲ, ಫೆ.25 (DaijiworldNews/PY) : ಪಾದಚಾರಿ ಮಹಿಳೆಗೆ ಡಿಕ್ಕಿ ಹೊಡೆದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೊಂಡಕ್ಕಿಳಿದ ಘಟನೆ ಭಾನುವಾರ ರಾತ್ರಿ ವಿಟ್ಲ ಠಾಣಾ ವ್ಯಾಪ್ತಿಯ ವೀರಕಂಭದಲ್ಲಿ ಸಂಭವಿಸಿದೆ.
ಗಂಭೀರವಾಗಿ ಗಾಯಗೊಂಡಿರುವ ವೀರಕಂಭ ನಿವಾಸಿ ಐತ್ತಪ್ಪ ಗೌಡ ಎಂಬವರ ಪತ್ನಿ ಧರ್ಮಾವತಿ ಗೌಡ ಎಂಬವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಧರ್ಮಾವತಿ ಅವರು ಬಿ.ಸಿ. ರೋಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿದ್ದಾರೆ.
ಕಾರು ನಜ್ಜುಗುಜ್ಜಾಗಿದ್ದು, ಚಾಲಕ ಪಾರಾಗಿದ್ದಾರೆ.