ಕಾರ್ಕಳ, ಫೆ 26 (DaijiworldNews/SM): ವಾಟ್ಸಪ್ ಮೇಸಜ್ ಹರಿಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನಿಗೆ ತಂಡವೊಂದು ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿರುವ ಘಟನೆ ನಗರದ ಮಂಜುನಾಥ ಪೈ ಕಾಲೇಜು ಬಳಿ ನಡೆದಿದೆ.
ಫೆಬ್ರವರಿ 24ರ ಮದ್ಯಾಹ್ನ 3:30ರ ವೇಳೆಗೆ ಪ್ರಕರಣದ ನಡೆದಿದ್ದು, ಎರ್ಲಪ್ಪಾಡಿ ಹೆಪ್ಪಳ ನಿವಾಸಿ ತೇಜಸ್ ನಾಯಕ್(19) ಪ್ರಕರಣದ ದೂರುದಾರರಾಗಿದ್ದಾರೆ. ಕಾರ್ಕಳ ಮಂಜುನಾಥ ಪೈ ಪ್ರಥಮ ದರ್ಜೆ ಕಾಲೇಜಿನ ಹೊರಗಡೆ ಇರುವ ಅಂಗಡಿಯಲ್ಲಿ ತೇಜಸ್ ನಾಯಕ್ ನಿಂತುಕೊಂಡಿದ್ದಾಗ, ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಬಂದ ಪರಿಚಯಸ್ಥನಾದ ನಿಟ್ಟೆ ನಿವಾಸಿ ಅನಿಲ್ ಹಾಗೂ ಮಂಜುನಾಥ ಪೈ ಕಾಲೇಜಿನ ವಿದ್ಯಾರ್ಥಿಗಳಾದ ಸಂಕೇತ್, ಕೌಶಿಕ್ ಹಲ್ಲೆಗೈದಿದ್ದಾರೆ.
ವಾಟ್ಸಪ್ ಮೇಸೆಜ್ ವಿಚಾರವೇ ಘಟನೆಗೆ ಕಾರಣವಾಗಿದೆ. ಆರೋಪಿಗಳು ತೇಜಸ್ ನನ್ನು ತಡೆದು ನಿಲ್ಲಿಸಿ ಕೈಯಿಂದ ಹೊಡೆದು ಕುತ್ತಿಗೆ ಬಿಗಿಯಾಗಿ ಹಿಡಿದು ಅವಾಚ್ಯ ಶಬ್ದಗಳಿಂದ ಬೈದು ದೂಡಿದ ಪರಿಣಾಮ ಅಲ್ಲೆ ಇದ್ದ ಗೇಟಿಗೆ ಹಣೆ ತಾಗಿ ಅವರಿಗೆ ಗಾಯವಾಗಿದೆ. ವಿಚಾರದ ಕುರಿತು ಪೊಲೀಸರಿಗೆ ದೂರು ನೀಡಿದರೆ ಕೊಂದು ಬಿಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಖೇಸುದಾಖಲಾಗಿರುತ್ತದೆ.