ಮಂಗಳೂರು, ಫೆ 27 (Daijiworld News/MB) : ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೋಟಕ ಇರಿಸಿದ ಆರೋಪಿ ಆದಿತ್ಯ ರಾವ್ಗೆ ಅನಾರೋಗ್ಯವಾಗಿದ್ದು ಆತನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬುಧವಾರ ಮಂಗಳೂರು ತಹಸೀಲ್ದಾರ್ ನೇತೃತ್ವದಲ್ಲಿ ಆರೋಪಿ ಗುರುತು ಪತ್ತೆ ಪರೇಡ್ ನಿಗದಿ ಮಾಡಲಾಗಿತ್ತು. ಆದರೆ ಆತ ಅಸೌಖ್ಯಕ್ಕೀಡಾದ ಹಿನ್ನಲೆಯಲ್ಲಿ ಪರೇಡ್ ಮುಂದೂಡಲಾಗಿದೆ.
ಆರೋಪಿಯು ಸ್ಪೋಟಕ ಇರಿಸಿದ ದಿನ ಆತನನ್ನು ಪ್ರತ್ಯಕ್ಷವಾಗಿ ನೋಡಿದ 15 ಮಂದಿಯ ಎದುರು ಪರೇಡ್ ನಡೆಸಲು ನಿರ್ಧಾರ ಮಾಡಲಾಗಿತ್ತು.
ಆದಿತ್ಯರಾವ್ ಜನವರಿ 20 ರಂದು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿ ಸ್ಪೋಟಕ ಇರಿಸಿ ಅಲ್ಲಿಂದ ಪರಾರಿಯಾಗಿದ್ದ. ಬಳಿಕ ಎರಡು ದಿನ ಕಳೆದು ಬೆಂಗಳೂರು ಪೊಲೀಸರ ಎದುರು ಶರಣಾಗಿದ್ದ.