ಪುತ್ತೂರು, ಫೆ.27 (DaijiworldNews/PY) : ಮದರಂಗಿ ಶಾಸ್ತ್ರ ಮುಗಿಸಿ ವಿವಾಹಕ್ಕೆ ತಯಾರಾಗಿದ್ದ ಮದುಮಗಳು ನಾಪತ್ತೆಯಾಗಿ ವಿವಾಹ ಕಾರ್ಯಕ್ರಮವೇ ರದ್ದಾದ ಘಟನೆ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪುಲ್ಲಾಜೆಯಲ್ಲಿ ನಡೆದಿದೆ.
ಪುಲ್ಲಾಜೆ ನಿವಾಸಿ ಬ್ಯಾಂಕ್ ಉದ್ಯೋಗಿಯೊಬ್ಬರ ಮಗಳ ವಿವಾಹವು ಕುಂಬ್ರದ ಶಿವಕೃಪಾ ಸಭಾ ಭವನದಲ್ಲಿ ಫೆ.26ರಂದು ನಿಗದಿಯಾಗಿತ್ತು. ಫೆ.25ರಂದು ರಾತ್ರಿ ವಧುವಿನ ಮನೆಯಲ್ಲಿ ಮದರಂಗಿ ಶಾಸ್ತ್ರ ಸಂಭ್ರಮವೂ ನಡೆದಿತ್ತು.
ರಾತ್ರಿ ಸುಮಾರು 12 ಗಂಟೆಯ ತನಕ ವಧುವಿನ ಮನೆಯಲ್ಲಿ ಮದರಂಗಿ ಶಾಸ್ತ್ರ ನಡೆದಿತ್ತು. ಸಂಬಂಧಿಕರೆಲ್ಲರೂ ಬುಧವಾರ ನಡೆಲಿದ್ದ ಮದುವೆಯ ಸಿದ್ದತೆಯಲ್ಲಿದ್ದರು.
ಮಂಗಳವಾರ ರಾತ್ರಿ ಊಟ ಮಾಡಿ ಮಲಗಿದ್ದವರು ಬೆಳಗ್ಗೆ ಎದ್ದಾಗ ಮನೆಯಲ್ಲಿ ಮಲಗಿದ್ದ ವಧು ನಾಪ್ತತೆಯಾಗಿದ್ದಳು. ಹುಡುಕಾಡಿದರೂ ಆಕೆ ಪತ್ತೆಯಾಗಲಿಲ್ಲ. ಬಳಿಕ ವಧು ನಾಪತ್ತೆಯಾದ ವಿಷಯವನ್ನು ವರನ ಮನೆಯವರಿಗೂ ತಿಳಿಸಲಾಯಿತು.
ಘಟನೆಯ ಕುರಿತು ವಧುವಿನ ತಂದೆ ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ಧಾರೆ. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಧು ಎಲ್ಲಿ ಹೋಗಿದ್ದಾಳೆ ಎಂಬ ಸಂಗತಿ ಇನ್ನಷ್ಟೆ ಬಯಲಾಗಬೇಕಿದೆ.