ಮಂಗಳೂರು, ಫೆ 27 (DaijiworldNews/SM): ಮಹಾನಗರ ಪಾಲಿಕೆಯ ಚುನಾವಣೆ ಕಳೆದು ಹಲವು ಸಮಯಗಳು ಕಳೆದರೂ ಮೇಯರ್ ಆಯ್ಕೆ ಪ್ರಕ್ರಿಯೆ ನಡೆದಿರಲಿಲ್ಲ. ಕೊನೆಗೂ ಇದೀಗ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ.
ಇದೀಗ ಮೇಯರ್ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಫೆಬ್ರವರಿ 27ರ ಶುಕ್ರವಾರ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಮೇಯರ್ ಸ್ಥಾನ ಆಕಾಂಕ್ಷಿಗಳಲ್ಲಿ ಹಲವು ಮಂದಿ ರೇಸ್ ನಲ್ಲಿದ್ದಾರೆ. ಆದರೆ, ಇದೀಗ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ದಿವಾಕರ ಪಾಂಡೇಶ್ವರ ಅವರನ್ನು ಮೇಯರ್ ಸ್ಥಾನದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದು, ಎಲ್ಲರನ್ನು ಅಚ್ಚರಿಗೊಳಿಸಿದೆ.
ಇನ್ನು ಅದೇ ರೀತಿಯಲ್ಲಿ ಉಪಮೇಯರ್ ಅಭ್ಯರ್ಥಿಯಾಗಿ ವೇದಾವತಿ ಯಾನೆ ಜಾನಕಿ ಅವರನ್ನು ಆಯ್ಕೆ ಮಾಡಿದೆ. ಶುಕ್ರವಾರದಂದು ನಡೆಯಲಿರುವ ಚುನಾವಣೆಯಲ್ಲಿ ಅಂತಿಮವಾಗಿ ಮೇಯರ್ ಆಯ್ಕೆ ಪ್ರಕ್ರಿಯೆಗೆ ತೆರೆ ಬೀಳಲಿದೆ.