ಉಡುಪಿ, ಫೆ 28 (DaijiworldNews/SM): ಬೆಂಗಳೂರು-ಉಡುಪಿ-ಕಾರವಾರ-ವಾಸ್ಕೋ ರೈಲು ಸಂಚಾರ ಮಾರ್ಚ್ 7ರಿಂದ ಆರಂಭವಾಗಲಿದೆ. ಭಾರತೀಯ ರೈಲ್ವೆಯ ವೇಳಾಪಟ್ಟಿ ಸಮಿತಿ ಸಭೆಯಲ್ಲಿ ದಿನಾಂಕ ಘೋಷಣೆ ಮಾಡಲಾಗಿದೆ ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ಮಾವಿನಕಟ್ಟೆಯಲ್ಲಿ ಸುದ್ಧಿಗಾರರ ಜೊತೆ ಮಾತನಾಡಿದ ಅವರು, ನಿರಂತರವಾಗಿ ಈ ರೈಲು ಸಂಚಾರ ಆರಂಭವಾಗಲು ಸಂಬಂಧಪಟ್ಟವರನ್ನು ಒತ್ತಾಯಿಸುತ್ತಲೇ ಬಂದಿರುವ ಕುಂದಾಪುರದ ರೈಲ್ವೆ ಹೋರಾಟ ಸಮಿತಿಯನ್ನು ನಾನು ಅಭಿನಂದಿಸುತ್ತೇನೆ. ಸಮಿತಿ ಸತತವಾಗಿ ಪ್ರಯತ್ನಿಸುತ್ತಲೇ ಬಂದಿದ್ದಾರೆ ಎಂದರು.
ಇದೇ ವಿಚಾರವಾಗಿ ನಾನು ರೈಲ್ವೇ ಸಚಿವ ಸುರೇಶ ಅಂಗಡಿ ಅವರ ಜೊತೆ ಮಾತನಾಡಿದ್ದೇನೆ. ಸಾಧ್ಯವಾದರೆ ನಾನು ಅದೇ ರೈಲ್ವೆಯಲ್ಲಿ ಮೊದಲ ದಿನ ಪಯಣ ಮಾಡಲಿದ್ದೇನೆ. ಈ ವಾಸ್ಕೋ ರೈಲ್ವೆ ಆರಂಭದಿಂದ ಈ ಎಲ್ಲಾ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.