ಉಡುಪಿ, ಫೆ 29 (Daijiworld News/MB) : ಉಡುಪಿ ಮೂಲದ ಯುವಕ ರಾಜ್ಯ ಮಟ್ಟದ ಪ್ರಸಿದ್ಧ ಟೆನ್ನಿಸ್ ಬಾಲ್ ಕ್ರಿಕೆಟ್ ಆಟಗಾರನೋರ್ವ ಆಟವಾಡುತ್ತಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ತುಮಕೂರಿನಲ್ಲಿ ಕ್ರಿಕೆಟ್ ಅಂಗಣದಲ್ಲಿ ಶುಕ್ರವಾರ ನಡೆದಿದೆ.
ಕಾಪು ಸಮೀಪದ ಪಾಂಗಾಳ ಗಾಂಧಿ ನಗರ ಸರಸ್ವತಿ ಕಾಲನಿ ನಿವಾಸಿ ಪ್ರಶಾಂತ್ ಕುಮಾರ್ (32) ಮೃತಪಟ್ಟವರು.
ಇವರು ಹವ್ಯಾಸಿ ಕ್ರಿಕೆಟ್ ಆಟಗಾರನಾಗಿದ್ದು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವು ತಂಡಗಳ ಮೂಲಕ ರಾಜ್ಯ ಮಟ್ಟದ ಕ್ರಿಕೆಟ್ ಪಂದಾಟ್ಯಗಳಲ್ಲಿ ಭಾಗವಹಿಸುತ್ತಿದ್ದರು. ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಇವರು ಅಲ್ಲಿನ ತಂಡವೊಂದರ ಪರ ಆಡುತ್ತಿದ್ದರು.
ಅವರು ತಾಯಿ, ಪತ್ನಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.
ತನ್ನ ವಿಶಿಷ್ಟ ಶೈಲಿಯ ಬೌಲಿಂಗ್, ಬ್ಯಾಟಿಂಗ್ ಹಾಗೂ ಪೀಲ್ಡಿಂಗ್ ಮೂಲಕ ಆಲ್ ರಂಡರ್ ಆಟಗಾರನಾಗಿದ್ದ ಪ್ರಶಾಂತ್ ಶುಕ್ರವಾರದ ಪಂದ್ಯದಲ್ಲಿ ಸತತ 2 ಸಿಕ್ಸರ್ ಬಾರಿಸಿದ್ದರು. ಆ ಬಳಿಕ ಅವರು ನೀರು ಕುಡಿದಿದ್ದು ಮರುಕ್ಷಣದಲ್ಲೇ ಕುಸಿದು ಬಿದ್ದರು. ಆ ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದರೂ ಅಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.