ಮಂಗಳೂರು, ಫೆ 29 (Daijiworld News/MB) : ಹಲವು ಆತ್ಮಹತ್ಯೆಗಳಿಂದಾಗಿ ಸುದ್ದಿಯಾಗಿರುವ ತೊಕ್ಕೂಟಿಗೆ ಹೋಗುವ ಹಾದಿಯಲ್ಲಿರುವ ನೇತ್ರಾವತಿ ನದಿಗೆ ಮತ್ತೋರ್ವ ಮಹಿಳೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಮಹಿಳೆಯನ್ನು ಬಿಕರ್ನಕಟ್ಟೆ ನಿವಾಸಿ ಉಮಾಪ್ರಶಾಂತ್ (42) ಎಂದು ಗುರುತಿಸಲಾಗಿದೆ.
ಮಹಿಳೆಯೊಬ್ಬರು ಶುಕ್ರವಾರ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದ್ದು ನೇತ್ರಾವತಿ ರೈಲ್ವೇ ಹಳಿಯಲ್ಲಿ ಚಪ್ಪಲಿ, ಮಹಿಳೆ ಬ್ಯಾಗ್ ಪತ್ತೆಯಾಗಿತ್ತು
ಮಹಿಳೆಯ ಶವ ಶನಿವಾರ ಬೆಳಿಗ್ಗೆ ಉಳ್ಳಾಲದ ಸ್ಥಳೀಯ ಮೀನುಗಾರ ಸೈಮನ್ ಅವರಿಗೆ ಪತ್ತೆಯಾಗಿದೆ.
ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಾಗಿದೆ.
ಶವವನ್ನು ವೆನ್ಲಾಕ್ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.