ಉಡುಪಿ, ಫೆ.29 (DaijiworldNews/PY) : ಕಾಂಗ್ರೆಸ್ನ ಹಿರಿಯ ಮುಖಂಡ ಹಾಗೂ ಉಡುಪಿಯ ಖ್ಯಾತ ಪಟಾಕಿ ಉದ್ಯಮಿ ಕೆ. ಕೃಷ್ಣರಾಜ್ ಸರಳಾಯ(87) ಅವರು ಶನಿವಾರ ಮಧ್ಯಾಹ್ನ ವೇಳೆ ಪಣಿಯಾಡಿಯಲ್ಲಿರುವ ತನ್ನ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.
ಇವರು ಮನೆಯಲ್ಲಿ ಒಂಟಿಯಾಗಿ ಬದುಕುತ್ತಿದ್ದು, ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕೃಷ್ಣರಾಜ್ ಸರಳಾಯ ಅವರ ಇಬ್ಬರು ಪುತ್ರಿಯರಿಗೆ ವಿವಾಹವಾಗಿದ್ದು, ಅವರು ಆಸ್ಟ್ರೇಲಿಯಾ ಹಾಗೂ ಬೆಂಗಳೂರಿನಲ್ಲಿ ನೆಲೆಸಿದ್ದರು.
ಕಾಂಗ್ರೆಸ್ ಮುಖಂಡರಾದ ಕೃಷ್ಣರಾಜ್ ಸರಳಾಯ ಅವರು, ಜಿಲ್ಲಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇವರು ಸಹಕಾರಿ ಧುರೀಣರಾಗಿದ್ದು, ಉಡುಪಿ ಟೌನ್ ಕೋಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಇವರು ಉಡುಪಿಯಲ್ಲಿ ಹಲವು ವರ್ಷಗಳಿಂದ ಪಟಾಕಿ ಉದ್ಯಮ ನಡೆಸುತ್ತಿದ್ದರು.