ಮಂಗಳೂರು, ಫೆ.29 (DaijiworldNews/PY) : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ಪತ್ರಕರ್ತರ ಒಕ್ಕೂಟ, ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನಾ ಟ್ರಸ್ಟ್ ವತಿಯಿಂದ ಶನಿವಾರ ಉರ್ವದ ರಾಧಾಕೃಷ್ಣ ಮಂದಿರದಲ್ಲಿ ಪ್ರೆಸ್ ಕ್ಲಬ್ ದಿನವನ್ನು ಆಚರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಟ ರೂಪೇಶ್ ಶೆಟ್ಟಿ ಅವರು, ಸಮಾಜದಲ್ಲಿ ಮಾಧ್ಯಮವು ಮಹತ್ವದ ಪಾತ್ರ ವಹಿಸುತ್ತದೆ. ಏಕೆಂದರೆ. ಮಾಧ್ಯಮವು ಸಮಾಜದ ಸಮಸ್ಯೆಗಳನ್ನು ಎತ್ತಿ ಹಿಡಿಯುತ್ತದೆ. ಪ್ರೆಸ್ ಕ್ಲಬ್ ದಿನವನ್ನು ನಡೆಸಿದ ಮಾಧ್ಯಮದವರಿಗೆ ನಾನು ಶುಭ ಹಾರೈಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳಾ ಹಾಜಬ್ಬ ಹಾಗೂ ಪತ್ರಕರ್ತ ಗುರುವಪ್ಪ ಬಾಳೆಪುಣಿ ಅವರನ್ನು ಸನ್ಮಾನಿಸಲಾಯಿತು.
ಎಚ್ಐವಿ/ಏಡ್ಸ್ ಬಾಧಿತ ಮಕ್ಕಳನ್ನು ಸಲಹುವ ಸ್ನೇಹದೀಪ ಸಂಸ್ಥೆಯನ್ನು ನಡೆಸುವ ತಬಸ್ಸುಮ್ ಅವರಿಗೆ ಪ್ರೆಸ್ ಕ್ಲಬ್ ಪ್ರಶಸ್ತಿ ನೀಡಲಾಯಿತು.
ಪ್ರೊ.ಬಾಲಕೃಷ್ಣ ಗಟ್ಟಿ, ಡಾ.ವಸಂತ ಕುಮಾರ್ ಪೆರ್ಲ ಹಾಗೂ ಡಾ.ನಾಗವೇಣಿ ಮಂಚಿ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಪ್ರೆಸ್ ಕ್ಲಬ್ ಪ್ರಶಸ್ತಿಗೆ ತಬಸ್ಸುಮ್ ಅವರನ್ನು ಆಯ್ಕೆ ಮಾಡಿದ್ದರು.
ಕಾರ್ಯಕ್ರಮದಲ್ಲಿ, ಡಿಸಿಪಿ ಲಕ್ಷ್ಮಿ ಗಣೇಶ್, ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಅಧ್ಯಕ್ಷ ಪತ್ರಿಕಾ ಭಾವನಾ ಟ್ರಸ್ಟ್ ಆನಂದ ಶೆಟ್ಟಿ ಉಪಸ್ಥಿತರಿದ್ದರು.
ಮಂಗಳೂರು ಪ್ರೆಸ್ ಕ್ಲಬ್ನ ಅಧ್ಯಕ್ಷ ಸ್ವಾಗತಿಸಿದರು, ಹರೀಶ್ ರೈ ಕಾರ್ಯಕ್ರಮವನ್ನು ಸಂಯೋಜಿಸಿದರು.