ಮಂಗಳೂರು, ಮಾ. 02 (Daijiworld News/MB) : ಕಳೆದ ಹಲವಾರು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಯ ತಾಪ ಹೆಚ್ಚಾಗಿದ್ದು ಸೋಮವಾರ ಈ ವರ್ಷದ ಮೊದಲ ಮಳೆ ಸುರಿದು ವಾತಾವರಣ ತಂಪಾಗಿದೆ.
ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬದ ವಿವಿಧ ಪ್ರದೇಶಗಳಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ.
ಮಂಗಳೂರಿನಲ್ಲಿ ಉಳ್ಳಾಲ, ತೊಕ್ಕೊಟ್ಟು, ಪಂಡಿತ್ಹೌಸ್, ಕುತ್ತಾರ್, ದೇರಳಕಟ್ಟೆ ಹಾಗೂ ಇತರ ಪ್ರದೇಶಗಳಾದ ಬಿಜೈ, ಬೊಂದೇಲ್, ಕಾವೂರು, ಪದವಿನಂಗಡಿ ಮುಂತಾದ ಪ್ರದೇಶಗಳಲ್ಲಿ ಮುಂಜಾನೆ 5 ಗಂಟೆಯಿಂದ ಉತ್ತಮ ಮಳೆಯಾಗಿದೆ.
ಈ ಅಕಾಲಿಕ ಮಳೆಯು ತಾಪಮಾನವನ್ನು ಕೊಂಚ ಕಡಿಮೆ ಮಾಡಿದೆ.
ಈ ಮೊದಲ ಮಳೆಯಿಂದಾಗಿ ಮಣ್ಣಿನ ಪರಿಮಳ ಎಲ್ಲೆಡೆ ಪಸರಿಸಿದ್ದು ಲಘು ಗಾಳಿ ಬೀಸುತ್ತಿದ್ದು ಭೂಮಿ ತೇವಗೊಂಡಿದೆ.