ಕಾಸರಗೋಡು, ಮಾ 2 (Daijiworld News/MSP): ಎ ಟಿ ಎಂ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ .
ಬಂಧಿತರನ್ನು ತಮಿಳುನಾಡು ತಿರುಚ್ಚಿರಾಪಳ್ಳಿಯ ಪಿ. ಜಯರಾಂ (30) , ಕಣ್ಣೂರಿನ ಆಲ್ವಿನ್ ಕೆ . ವಿ (25) , ಕೋಜಿಕ್ಕೋಡ್ ನ ಅಖಿಲ್ ಜೋರ್ಜ್ ( 27) ಮತ್ತು ಕೋಟೆ ಯಂ ನ ಕೆ. ಎಸ್ ಸಂಧು ನೆಪೋಲಿಯನ್ ( 21) ಎಂದು ಗುರುತಿಸಲಾಗಿದೆ.
ಕೆನಡಾ ಸೇರಿದಂತೆ ವಿದೇಶಿ ಯರ ಹಣವನ್ನು ತಂಡವು ಲಪಟಾಯಿಸುತ್ತಿದ್ದು , ಜಯರಾಂ ಪ್ರಮುಖ ಸೂತ್ರಧಾರನಾಗಿದ್ದು , ಗೋವಾದಲ್ಲಿ ಇವರ ಕೇಂದ್ರ ಎನ್ನಲಾಗಿದೆ . ಎಟಿಎಂ ಕಾರ್ಡ್ ನ ಬಾರ್ ಕೋಡ್ ಸಂಗ್ರಹಿಸಿ ಇನ್ನೊಂದು ಎಟಿಎಂ ಕಾರ್ಡ್ ಬಳಸಿ ಇವರು ವಂಚನೆ ನಡೆಸುತ್ತಿದ್ದರು . ಇದೇ ರೀತಿ ಹಲವರಿಂದ ಲಕ್ಷಾಂತರ ರೂ . ವಂಚನೆ ಮಾಡಿದ್ದಾಗಿ ತನಿಖೆ ಯಿಂದ ತಿಳಿದುಬಂದಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ