ಕುಂದಾಪುರ, ಮಾ 2 (Daijiworld News/MSP): ತಾಲೂಕಿನಾದ್ಯಂತ ಎಲ್ಲೆಂದರಲ್ಲಿ ಇಸ್ಪೀಟ್ ಕ್ಲಬ್ ನಡೆಸಲಾಗುತ್ತಿದೆ ಎಂಬ ಅರೋಪ ಕೇಳಿಬರುತ್ತಿರುವ ಹಿನ್ನಲೆಯಲ್ಲಿ , ಪೊಲೀಸರಿಗೆ ದೊರಕಿದ ಅಧಿಕೃತ ಮಾಹಿತಿ ಆಧರಿಸಿ ದಾಳಿ ನಡೆಸಿ ಲಕ್ಷಾಂತರ ರೂಪಾಯಿ ವಶಪಡಿಸಿಕೊಂಡಿದ್ದಾರೆ.
ಕೋಟೇಶ್ವರ ಗ್ರಾಮದ ಕಾಗೇರಿಯಲ್ಲಿರುವ ಯುನಿಟಿ ರಿಕ್ರಿಯೇಶನ್ ಅಸೋಸಿಯೇಶನ್ ಕ್ಲಬ್ಗೆ ದಾಳಿ ನಡೆಸಿದ ಸಂದರ್ಭ ಕೋಳ್ಕೇರೆ ನಿವಾಸಿ ಸೂರ ಪೂಜಾರಿ(65), ಕರ್ಕುಂಜೆ ಗ್ರಾಮದ ಕೆಂಚನೂರು ನಿವಾಸಿ ಜಯರಾಜ (44), ಅಂಕದಕಟ್ಟೆ ನಿವಾಸಿ ಎಸ್. ಕುಮಾರ್(54), ಯಡಾಡಿ ಮತ್ಯಾಡಿ ಗ್ರಾಮದ ಗಾವಳಿ ಗಣೇಶ(46), ಹಂಗಳೂರು ನಿವಾಸಿ ಸಂತೋಷ (42),ಆದರ್ಶ ಆಸ್ಪತ್ರೆ ಸಮೀಪ ವಾಸಿ ಶೀನ ಪೂಜಾರಿ(64), ಮಾರುತಿವನ ರಸ್ತೆ, ಕೋಟೇಶ್ವರ ನಿವಾಸಿ ಮಂಜುನಾಥ(45), ಹಳೆಅಳಿವೆ ಅರಾಲ್ಗುಡ್ಡೆ ನಿವಾಸಿ ಗಣೇಶ್(32), ಮೂಡುಗೋಪಾಡಿ ನಿವಾಸಿ ನಾರಾಯಣ(55), ಶಂಕರನಾರಾಯಣ ಕುಪ್ಪಾರು ನಿವಾಸಿ ಉದಯ ಆಚಾರಿ(35),
ಮೂಡ್ಲಕಟ್ಟೆ ಉಳ್ಳೂರು ಮಕ್ಕಿಮನೆ ನಿವಾಸಿ ಜಯಪ್ರಕಾಶ ಶೇರೆಗಾರ್(49),ಹನಾ ಎಸ್ಟೇಟ್ ಅಂಕದಕಟ್ಟೆ ನಿವಾಸಿ ರಾಮಣ್ಣ ಶೆಟ್ಟಿ(55), ಮಾರ್ಕೋಡು ಹಾಡಿಮನೆ ನಿವಾಸಿ ಉದಯಕುಮಾರ್ ಶೆಟ್ಟಿ(42) ಇವರನ್ನು ವಶಕ್ಕೆ ಪಡೆದು ಹದಿಮೂರು ಸಾವಿರದ ನಲ್ವತ್ತು ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗೋಳಿಯಂಗಡಿಯ ಲಕ್ಷ್ಮೀ ಬಾರ್ ಮೇಲ್ಭಾಗದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು, ಸಿದ್ದಾರ್ಥ ಶೆಟ್ಟಿ, ಸಂತೋಷ ಕುಮಾರ್ ಶೆಟ್ಟಿ, ಹರೀಶ್ ಶೆಟ್ಟಿ, ರಮೇಶ್ ಕುಲಾಲ್, ವಿಲ್ಸ್ನ್, ಉದಯ ಭಂಡಾರಿ, ಹರೀಶ್ ತೋಳಾರ್,. ಆನಂದ ಪೂಜಾರಿ, ಮಹಾಬಲ, ಮಂಜುನಾಥ, ಭುಜಂಗ ಶೆಟ್ಟಿ ಎಂಬವರನ್ನು ವಶಕ್ಕೆ ಪಡೆದು ಒಂದು ಲಕ್ಷದ ಮೂರು ಸಾವಿರದ ಇನ್ನೂರ ಐದು ರೂಪಾಯಿ ನಗದು, 12 ಮೊಬೈಲ್, 2 ಕಾರು, 3 ಬೈಕ್ ವಶಪಡಿಸಿಕೊಂಡು ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
ಸಿದ್ದಾಪುರ ಗ್ರಾಮದ ದೊಟ್ಟಿನಬೇರು ಎಂಬಲ್ಲಿ ಜಯರಾಮ ಶೆಟ್ಟಿ ಎಂಬುವವರ ಶಾಂತ ರಿಕ್ರಿಯೇಷನ್ಗೆ ದಾಳಿ ನಡೆಸಿದ್ದು, ಮಹೇಶ್ ಪೂಜಾರಿ, ಅನಿಲ ಕೆ ಶೆಟ್ಟಿ, ಹಿರಿಯಣ್ಣ ಶೆಟ್ಟಿ, ಅವಿನಾಶ್, ನಾಗರಾಜ ಎನ್, ರಂಗಸ್ವಾಮಿ ಇವರು ಅಂದರ್-ಬಾಹರ್ ಇಸ್ಟೀಟ್ ಜುಗಾರಿ ಆಡುತ್ತಿದ್ದು, ಒಟ್ಟು 6,745 ರೂಪಾಯೊ ನಗದು, 5 ಮೊಬೈಲ್, ಒಂದು ಬೈಕ್, ಒಂದು ಕಾರನ್ನು ವಶಪಡಿಸಿಕೊಂಡು ವಶಪಡಿಸಿಕೊಂಡಿದ್ದಾರೆ.
ಬೈಂದೂರು ಯಡ್ತರೆ ಗ್ರಾಮದ ಸೌಪರ್ಣೆಕ ಕಾಂಪ್ಲೆಕ್ಸ್ನ ಎಂ.ಜಿ ರಿಕ್ರಿಯೇಷನ್ ಕ್ಲಬ್ಗೆ ದಾಳಿ ನಡೆಸಿದ ಬೈಂದೂರು ಪೊಲೀಸರು ಜುಗಾರಿ ನಿರತರಾಗಿದ್ದ ಪ್ರಶಾಂತ ಬಂಕೇಶ್ವರ (46), ಅರೆಹೊಳೆ ಸುರೇಶ (46), ಅರೆಕಲ್ಲು ರಾಜೇಶ(36), ಭಟ್ಕಳ ತೆರಗೋಡು ರಾಜು ರಾಮನಾಯ್ಕ(40), ಗಣೇಶ ಬಂಕೇಶ್ವರ(46), ಬಾಡಾ ಮಾದಯ್ಯನ ಮನೆ ನಿವಾಸಿ ಸತೀಶ್(40), ಪಡುರಿ ಗ್ರಾಮದ ಜಯಂತ(35), ಗಂಟಿಹೊಳೆ ವೀರೇಂದ್ರ ಶೆಟ್ಟಿ(50), ಗೋಪಾ ಬಂಕೇಶ್ವರ(47), ಸೂರ್ಕುಂದ ರಾಘವೇಂದ್ರ(43), ತಾರಾಪತಿ ನಾರಾಯಣ ಖಾರ್ವಿ(55) ಶಕ್ಕೆ ಪಡೆದು ಪರಿಶೀಲಿಸಿ ನಗದು ರೂಪಾಯಿ 26,500/- ರೂಪಾಯಿ ಹಾಗೂ 9 ಮೊಬೈಲ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.