ತಲಪಾಡಿ, ಮಾ 2 (Daijiworld News/MSP): ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಸೇತುವೆಗೆ ಢಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ಕೆ.ಸಿ.ರೋಡು ಉಚ್ಚಿಲ ಸೇತುವೆ ಬಳಿ ಮಾ.3 ರ ಬೆಳಗ್ಗೆ ನಡೆದಿದೆ.
ಚಾಲಕ ನಿದ್ರೆ ಮಂಪರಿನಲ್ಲಿದ್ದುದೇ ಘಟನೆಗೆ ಕಾರಣ ಎನ್ನಲಾಗಿದೆ. ಘಟನೆಯಲ್ಲಿ ಪಿಕಪ್ ಚಾಲಕ ಗಾಯಗೊಂಡಿದ್ದಾರೆ. ಮಂಗಳೂರಿನಿಂದ ಕೇರಳಕ್ಕೆ ಮೀನು ಸಾಗಿಸುತ್ತಿದ್ದ ವಾಹನ ಇದಾಗಿದ್ದು ಸಂಪೂರ್ಣ ನಜ್ಜುಗುಜ್ಜಾಗಿದೆ. .ಕೆ ಸಿ ರೋಡು ಉಚ್ಚಿಲ ಸೇತುವೆ ವಾಹನ ಢಿಕ್ಕಿ ಹೊಡೆದು ಸೇತುವೆಯಲ್ಲಿ ಸಿಲುಕಿಕೊಂಡಿತ್ತು.
ಸೇತುವೆ ಕೆಳಗೆ ಹಲವು ಅಡಿ ಆಳಕ್ಕೆ ಬೀಳದೆ ಸೇತುವೆಯಲ್ಲೇ ಸಿಲುಕಿಕೊಂಡಿದ್ದರಿದ ದೊಡ್ಡ ದುರಂತ ತಪ್ಪಿದೆ. ಘಟನೆ ಬಳಿಕ ಕ್ರೇನ್ ಮೂಲಕ ವಾಹನ ಮೇಲೆತ್ತಲಾಯಿತು. ಮಂಗಳೂರು ನಾಗುರಿ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.