ಮಂಗಳೂರು, ಮಾ. 04 (Daijiworld News/MB) : ಪ್ರೆಸಿಡೆನ್ಸಿ ಸ್ಕೂಲ್ ಮಂಗಳೂರು ಹಾಗೂ ಸಂಚಾರ ಪಶ್ಚಿಮ ಪೋಲಿಸ್ ಠಾಣೆ, ಪಾಂಡೇಶ್ವರ ವತಿಯಿಂದ ಅಪರಾಧ ತಡೆ ಮಾಸಾಚರಣೆ ಹಾಗೂ ರಸ್ತೆ ಸುರಕ್ಷತಾ ಅರಿವು ಮೂಡಿಸುವ ಕಾರ್ಯಕ್ರಮವು ನಗರದ ಪಿ.ವಿ.ಎಸ್ ಸರ್ಕಲ್ ಬಳಿ ನಡೆಯಿತು.
ಕಾರ್ಯಕ್ರಮವನ್ನು ಪಾಂಡೇಶ್ವರ ಪಶ್ಚಿಮ ವಲಯದ ಪಿ.ಎಸ್.ಐ ಎಸ್.ಎಮ್ ರುದ್ರಪ್ಪ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿ "ರಸ್ತೆ ಸುರಕ್ಷತಾ ನಿಯಮಗಳನ್ನು ಜನರು ಕಡ್ಡಾಯವಾಗಿ ಪಾಲಿಸಬೇಕಾಗಿದೆ, ವಾಹನಗಳ ದಾಖಲೆ ಪತ್ರಗಳು, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್, ಹಾಗೂ ಕಾರು ಚಲಾಯಿಸುವವರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿಯೇ ಸಂಚರಿಸಬೇಕು" ಎಂದರು.
ಪ್ರೆಸಿಡೆನ್ಸಿ ಸ್ಕೂಲ್ ಮಂಗಳೂರಿನ ಪ್ರಾಂಶುಪಾಲರಾದ ಮಧುಮಿಕ ಮಾತನಾಡಿ, "ರಸ್ತೆ ಸುರಕ್ಷತೆಯ ಕುರಿತು ಜನರಿಗೆ ಮಾಹಿತಿ ನೀಡುವ ಸಲುವಾಗಿ ಮಕ್ಕಳು ಕಾಲ್ನಡಿಗೆ ಜಾಥವನ್ನು ಹಮ್ಮಿಕೊಳ್ಳಲಾಗಿದೆ, ಇನ್ನೂ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಯೇ ಸಂಚಾರಿಸಬೇಕು, ಮಧ್ಯಪಾನ ಮಾಡಿ ವಾಹನ ಸಂಚಾರ ಮಾಡುವುದು ಅಪರಾಧವಾಗಿದೆ" ಎಂದು ತಿಳಿಸಿದರು.
ಪ್ರೆಸಿಡೆನ್ಸಿ ಸ್ಕೂಲ್ ವಿದ್ಯಾರ್ಥಿಗಳಿಂದ ಪಿ.ವಿ.ಎಸ್ ಸರ್ಕಲ್ ನಿಂದ ಲಾಲ್ಭಾಗ್ ವರೆಗೆ ವಿವಿಧ ರೀತಿಯ ರಸ್ತೆ ಸುರಕ್ಷತೆಗಳ ಪೊಸ್ಟರ್ಗಳನ್ನು ಹಿಡಿದು ವಾಹನ ಸವಾರರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ಬಳಿಕ ಲಾಲ್ಭಾಗ್ನಲ್ಲಿ ಮಕ್ಕಳಿಂದ ರಸ್ತೆ ಸುರಕ್ಷತೆಯ ಬಗೆಗಿನ ಬೀದಿ ನಾಟಕ ಹಾಗೂ ಮೈಮ್ಶೋ ನಡೆಯಿತು.
ಈ ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಾಪಕರು,ವಿದ್ಯಾರ್ಥಿಗಳು, ಪೋಷಕರು ಹಾಗೂ ಪೋಲಿಸ್ ಸಿಬ್ಬಂದಿಗಳು ಮತ್ತು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.