ಮಂಗಳೂರು, ಮಾ 4 (Daijiworld News/MSP): ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೋಟಕದ ಇರಿಸಿದ್ದ ಆರೋಪಿ ಆದಿತ್ಯ ರಾವ್ ಮಲೇರಿಯಾ ಜ್ವರದಿಂದ ಚೇತರಿಸಿಕೊಂಡ ಹಿನ್ನಲೆಯಲ್ಲಿ ಆತನನ್ನು ಆಸ್ಪತ್ರೆಯಿಂದ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ.
ವಿಮಾನ ನಿಲ್ದಾಣದಲ್ಲಿ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ಅದಿತ್ಯ ರಾವ್ ಮಲೇರಿಯಾದಿಂದ ಬಳಲುತ್ತಿದ್ದ ಕಾರಣ ಫೆ. 25ರಂದು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈತನ ಅನಾರೋಗ್ಯ ಕಾರಣಕ್ಕೆ ಅಂದು ನಡೆಯಬೇಕಾಗಿದ್ದ ಗುರುತು ಪತ್ತೆ ಪೆರೇಡ್ ಮುಂದೂಡಲಾಗಿತ್ತು.
ಇನ್ನು ಆತನ ಗುರುತು ಪತ್ತೆ ಪರೇಡ್ ಆಗಬೇಕಾಗಿದೆ. ಮತ್ತೆ ಅತನ ಗುರುತು ಪತ್ತೆ ಪೆರೇಡ್ ನಡೆಸುವಂತೆ ಕೋರಿ ಪ್ರಕರಣದ ತನಿಖಾಧಿಕಾರಿಗಳು ತಹಸೀಲ್ದಾರ್ ಗೆ ಪತ್ರ ಬರೆದಿದ್ದಾರೆ.
ಜನವರಿ 20ರಂದು ಆದಿತ್ಯ ರಾವ್ ವಿಮಾನ ನಿಲ್ದಾಣಕ್ಕೆ ಸ್ಫೋಟಕ ಇರಿಸಲು ತೆರಳಿದ್ದು ಹಾಗೂ ಅಲ್ಲಿಂದ ವಾಪಸ್ ತರಲಿರುವ ನೋಡಿದ ಸುಮಾರು 15 ಮಂದಿಯನ್ನು ಗುರುತುಪತ್ತೆ ಪೆರೇಡ್ ಗೆ ಆಹ್ವಾನಿಸಲಾಗಿದೆ ಎಂದು ಪ್ರಕರಣದ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿತ್ತು ನಂತರ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.