ಕಲಬುರಗಿ, ಫೆ 14: ಕರಾವಳಿಯಲ್ಲಿ ಎರಡು ಭಯೋತ್ಪಾದಕ ಫ್ಯಾಕ್ಟರಿಗಳಿವೆ. ನನಗೆ ಇನ್ನು ಸ್ವಲ್ಪ ಸಮಯ ದೊರಕುತ್ತಿದ್ದರೆ ಆ ಎರಡು ಫ್ಯಾಕ್ಟರಿಗಳನ್ನು ನೆಲಸಮಮಾಡುತಿದ್ದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಕಲಬುರಗಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ ಬಿಜೆಪಿ ಪಕ್ಷಕ್ಕೆ ಸತ್ತವರ ಮನೆಗಳಿಗೆ ಬೇಟಿ ನೀಡಿ ಮರಣೋತ್ತರ ಸದಸ್ಯತ್ವ ನೀಡೋದೆ ಕೆಲಸವಾಗಿ ಬಿಟ್ಟಿದೆ. ರಾಜ್ಯದಲ್ಲಿ 23 ಹಿಂದೂಗಳ ಕೊಲೆ ಆಗಿದೆ ಬಿಜೆಪಿ ಸುಳ್ಳುಹೇಳುತ್ತಿದೆ. ಆದರೆ 9 ಮಂದಿ ಹಿಂದೂಗಳು ಮಾತ್ರ ಕೋಮು ಜಗಳದಲ್ಲಿ ಕೊಲೆ ಆಗಿದ್ದಾರೆ. ಬಿಜೆಪಿವರು ಯಾರಾದ್ರೂ ಸಾಯೋದನ್ನೇ ಕಾಯ್ತಾ ಇರುತ್ತಾರೆ ಬಳಿಕ ಸುಳ್ಳು ಹೇಳಿಕೊಂಡು ತಿರುಗುತ್ತಾರೆ ಎಂದು ಕುಹಕವಾಡಿದರು. ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಭಯೋತ್ಪಾದಕರ ಫ್ಯಾಕ್ಟರಿಗಳಿದ್ದು, ಇವುಗಳನ್ನು ಮಟ್ಟ ಹಾಕಲು ಸ್ವಲ್ಪ ಸಮಯವಕಾಶ ಬೇಕಿದೆ ಎಂದು ಹೇಳಿದರು.