ಮಂಗಳೂರು, ಮಾ.05 (DaijiworldNews/PY) : ಪಂಪ್ವೆಲ್ ಬಳಿಯ ನಿರ್ಮಲಾ ಸೇವಾ ಕೇಂದ್ರದ ಬಳಿ ಕಾರೊಂದು ಕಿರಿದಾದ ಸೇತುವೆಗೆ ಸಿಲುಕಿದ ಪರಿಣಾಮ ಮುಂದಾಗಬಹುದಾದ ದುರಂತವೊಂದು ಸ್ವಲ್ಪದರಲ್ಲೆ ತಪ್ಪಿದೆ. ಈ ರಸ್ತೆ ಕಿರಿದಾಗಿದ್ದು, ಇನ್ನೊಂದೆಡೆ ಕಾಮಗಾರಿ ಪೂರ್ಣಗೊಳ್ಳದೆ ಜನ ಸಾಮಾನ್ಯರು ದಿನನಿತ್ಯ ಪರದಾಡುವಂತಾಗಿದೆ.
ಫುಟ್ಪಾತ್ಗೂ ಜಾಗವಿಲ್ಲದಂತೆ ನಿರ್ಮಾಣವಾಗಿರುವ ಈ ರಸ್ತೆಯು ಪಾದಚಾರಿಗಳು ಮಾತ್ರವಲ್ಲ ವಾಹನ ಚಾಲಕರಿಗೂ ಸಮಸ್ಯೆಯಾಗಿ ಪರಿಣಮಿಸಿದೆ. ಇನ್ನು ಕೇರಳ ನೋಂದಣಿಯ ಕಾರೊಂದು ಕಿರಿದಾದ ರಸ್ತೆಯ ಮೋರಿ ಬಳಿ ಬಂದು ಸಿಲುಕಿಕೊಂಡು ಮುಂದಾಗಬಹುದಾದ ಅನಾಹುತ ತಪ್ಪಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಂಬಂಧ ಪಟ್ಟ ಸಂಸ್ಥೆಗಳು ತಕ್ಷಣ ಎಚ್ಚೆತ್ತುಕೊಂಡು ಕಾಮಗಾರಿ ಪೂರ್ಣಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.