ಮೂಡುಬಿದರೆ ಸೆ18: ಇಲ್ಲಿನ ನಿಡ್ಡೋಡಿ ಗ್ರಾಮದ ಮಂಜನಬೈಲಿನಲ್ಲಿ ಚಿರತೆಯೊಂದು ಸೆರೆ ಸಿಕ್ಕಿದೆ. ಇಲ್ಲಿ ಕಳೆದ ಸುಮಾರು ಹತ್ತು- ಹದಿನೈದು ದಿನಗಳಿಂದ ಚಿರತೆ ಕಾಟ ಹೆಚ್ಚಾಗಿದ್ದು ಈ ಬಗ್ಗೆ ಪ್ರಾಣಭಯದಿಂದ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಮಂಜನಬೈಲಿನ ಫ್ರಾನ್ಸಿಸ್ ಸೆ 16,ರಂದು ತಮ್ಮ ಮನೆಯ ಸುತ್ತಮುತ್ತ ಚಿರತೆ ಓಡಾಟವನ್ನು ಗಮನಿಸಿ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರು. ಹೀಗಾಗಿ ಮೂಡುಬಿದಿರೆ ವಲಯ ಅರಣ್ಯ ಅಧಿಕಾರಿಗಳ ತಂಡ ಬೋನು ಇರಿಸಿದ್ದು, ಸೆ 17ರ ರಾತ್ರಿ ಚಿರತೆ ಬೋನಿಗೆ ಬಿದ್ದಿದೆ. ಸ್ಥಳೀಯರ ಸಹಕಾರದೊಂದಿಗೆ ಚಿರತೆಯನ್ನು ಘಟನಾ ಸ್ಥಳದಿಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಾಂತರಿಸಿದ್ದಾರೆ.