ಬಂಟ್ವಾಳ, ಮಾ 5(Daijiworld News/MSP): ಪಿಕಪ್ ವಾಹನ ಮತ್ತು ರಿಕ್ಷಾ ಮಧ್ಯೆ ಬಂಟ್ವಾಳ ಕೆಳಗಿನ ಪೇಟೆಯಲ್ಲಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ರಿಕ್ಷಾ ಚಾಲಕ, ಪಿಕಪ್ ಚಾಲಕ ಸೇರಿದಂತೆ ಐವರಿಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ಸಂಜೆ ನಡೆದಿದೆ.
ಬಿಸಿರೋಡಿನಿಂದ ಬಂಟ್ವಾಳ ಕಡೆಗೆ ಸಾಫ್ಟ್ ಡ್ರಿಂಕ್ಸ್ ಗಳನ್ನು ಕೊಂಡು ಹೋಗುತ್ತಿದ್ದ ಪಿಕಪ್ ವಾಹನ ಬಂಟ್ವಾಳ ದಿಂದ ಬಿಸಿರೋಡು ಕಡೆಗೆ ಬರುತ್ತಿದ್ದ ಸರ್ವೀಸ್ ರಿಕ್ಷಾ ಕ್ಕೆ ಡಿಕ್ಕಿಯಾಗಿ ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ರಸ್ತೆ ಮಧ್ಯ ದಲ್ಲಿ ಪಲ್ಟಿಯಾಗಿದೆ. ಘಟನೆಯಲ್ಲಿ ರಿಕ್ಷಾ ಚಾಲಕ ಪರ್ಲ ನಿವಾಸಿ ಜೆರಾಲ್ಡ್ ಸಾಂಕ್ತಿಸ್ , ಪಿಕಪ್ ಚಾಲಕ ಗೌತಮ್ ಹಾಗೂ ರಿಕ್ಷಾದಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಬಿಸಿರೋಡಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ
ಪಿಕಪ್ ವಾಹನ ರಸ್ತೆಯಲ್ಲಿ ಅಡ್ಡಲಾಗಿ ಬಿದ್ದ ಕಾರಣ ಸ್ವಲ್ಪ ಹೊತ್ತು ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಸುಮಾರು ಒಂದು ಗಂಟೆಗಳ ಕಾಲ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡದೆ ಬಳಿಕ ವಾಹನ ತೆರವುಗೊಳಿಸಲಾಯಿತು. ಅಪಘಾತದ ಪರಿಣಾಮ ರಸ್ತೆಯಲ್ಲಿ ಸೋಡಾ ಬಾಟಲಿ ಚೆಲ್ಲಾಪಿಲ್ಲಿಯಾಗಿತ್ತು. ಸ್ಥಳೀಯ ಯುವಕರು ಸೋಡಾ ಬಾಟಲಿ ಗಳನ್ನು ಸ್ವಯಂಸೇವಕ ರಾಗಿ ತೆರವುಗೊಳಿಸಿದರು.
ಸ್ಥಳ ಕ್ಕೆ ಟ್ರಾಫಿಕ್ ಎಸ್.ಐ.ರಾಜೇಶ್ ಕೆವಿ.ಎ.ಎಸ್.ಐ.ಕುಟ್ಟಿ, ಬಾಲಕೃಷ್ಣ, ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.