ಮೂಡುಬಿದಿರೆ, ಮಾ. 06 (Daijiworld News/MB): ಸ್ಕೂಟರ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೆ| ಜಿ. ಶ್ರೀಧರ ಶೆಣೈ ಆಂಡ್ ಸನ್ಸ್ನ ವ್ಯಾಪಾರಿ ಮಾಧವ ಶೆಣೈ (63) ಮೃತಪಟ್ಟ ಘಟನೆ ಬುಧವಾರ ತಡರಾತ್ರಿ ನಡೆದಿದೆ.

ಇವರು ಇಬ್ಬರು ಸಹೋದರರ ಜೊತೆ ಪೇಟೆಯಲ್ಲಿ ವ್ಯಾಪಾರ ನಡೆಸುತ್ತಿದ್ದು ಬುಧವಾರ ಪೇಟೆಯಿಂದ ಸ್ವರಾಜ್ಯ ಮೈದಾನ ಈಜುಕೊಳ ಬದಿಯಲ್ಲೇ ಹಾದು ಹೋಗುವ ರಿಂಗ್ರೋಡ್ನ ಬದಿಯಲ್ಲೇ ಇರುವ ತಮ್ಮ ಮನೆ ಕಡೆಗೆ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಲಾರಿ ಡಿಕ್ಕಿಯಾಗಿದೆ.
ಡಿಕ್ಕಿಯಾದ ಪರಿಣಾಮ ಮಾಧವ ಶೆಣೈ ಅವರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ತಡರಾತ್ರಿ ಮೃತಪಟ್ಟಿದ್ದಾರೆ.
ಈ ಘಟನೆಗೆ ಸಂಬಂಧಿಸಿ ಲಾರಿ ಚಾಲಕ ವಿಜಯನ್ ಟಿ.ಎನ್. ವಿರುದ್ಧ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಅಸರ್ಮಕ ರಿಂಗ್ ರೋಡ್ ಬಗ್ಗೆ ಈಗಾಗಲೇ ಸ್ಥಳೀಯರೊಬ್ಬರು ಲೋಕಾಯುಕ್ತ ಅದಾಲತ್ನಲ್ಲಿ ದೂರು ನೀಡಿದ್ದು ಲೋಕಾಯುಕ್ತರು ಸಂಬಂಧಿಸಿದ ಅಧಿಕಾರಿಗಳಿಗೆ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚನೆ ನೀಡಿದ್ದರು. ಆದರೆ ಈವರೆಗೂ ಯಾವುದೇ ಬೆಳವಣಿಗೆ ಕಂಡು ಬಂದಿಲ್ಲ.