ಉಡುಪಿ, ಮಾ.06 (DaijiworldNews/PY) : ನಿವೃತ್ತ ಖಾತೆ ಅಧೀಕ್ಷಕರೊರ್ವರು ತಮ್ಮ ವಾಸದ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಹೊರ ವಲಯದ ಬೈಲೂರು ಜಗನ್ನಾಥ ನಗರದಲ್ಲಿ ನಡೆದಿರುವುದು, ಶುಕ್ರವಾರ ನಸುಕಿನ ಜಾವದಲ್ಲಿ ಬೆಳಕಿಗೆ ಬಂದಿದೆ.
ಮೃತರು ಬೈಲೂರು ಜಗನ್ನಾಥ ನಗರದ 5 ನೇ ಕ್ರಾಸ್ ಇಲ್ಲಿಯ ನಿವಾಸಿ ರಾಮೂಜಿ ರಾವ್ (65) ಎಂದು ತಿಳಿದು ಬಂದಿದೆ.
ಇವರು ನಗರಸಭೆ, ಸರ್ವ ಶಿಕ್ಷಣ ಅಭಿಯಾನ, ತಾಲೂಕು ಪಂಚಾಯತ್ ಇಲಾಖೆಗಳಲ್ಲಿ ಖಾತೆ ಅಧಿಕ್ಷಕರಾಗಿ ಸೇವೆಸಲ್ಲಿಸಿ ನಿವೃತಿ ಹೊಂದಿದವರೆಂದು ತಿಳಿದು ಬಂದಿದೆ. ಆತ್ಮಹತ್ಯೆಯ ಕಾರಣ ತಿಳಿದು ಬಂದಿಲ್ಲವಾಗಿದೆ. ಘಟನೆ ಬಗ್ಗೆ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಸಾಗಿಸಲು ಉಚಿತ ಅಂಬುಲೇನ್ಸ್ ಸೇವೆ ಒದಗಿಸಿದ್ದಾರೆ.