ಮಂಗಳೂರು, ಮಾ. 06 (Daijiworld News/MB) : ಮಂಗಳೂರಿನಲ್ಲಿ ಮಾರ್ಚ್ 7 ಹಾಗೂ 8 ರಂದು ನಡೆಯಲಿರುವ ರಾಜ್ಯ ಪತ್ರಕರ್ತರ ಸಮ್ಮೇಳನದ ಊಟೋಪಚಾರಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವತಿಯಿಂದ ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿದ್ದ ಕುತ್ಲೂರು ಸರ್ಕಾರಿ ಶಾಲೆಯ ಮಕ್ಕಳು ಶಾಲೆಯಲ್ಲಿ ಬೆಳೆದ ತರಕಾರಿಗಳನ್ನು ಕೊಡುಗೆಯಾಗಿ ನೀಡಿದರು.
ಶಾಲೆಯ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಶಾಲೆಯಲ್ಲಿ ಬೆಳೆಸಲಾದ ಸೌತೆಕಾಯಿ, ಅಲಸಂಡೆ, ಬದನೆ ಸೇರಿದಂತೆ ವಿವಿಧ ಬಗೆಯ ತರಕಾರಿಗಳನ್ನು ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಪತ್ರಕರ್ತರ ಸಂಘದ ಪದಾಧಿಕಾರಿಗಳಿಗೆ ಶುಕ್ರವಾರ ಹಸ್ತಾಂತರ ಮಾಡಿದರು.
ವಿದ್ಯಾರ್ಥಿಗಳು ಕೊಡುಗೆ ಮಾಡಿರುವ ಈ ತರಕಾರಿಗಳು ಸಾವಯವ ರೀತಿಯಲ್ಲಿ ಬೆಳೆಸಿದ, ಕೇವಲ ಸೆಗಣಿ ನೀರು ಹಾಕಿರುವ ತರಕಾರಿಗಳಾಗಿದೆ.