ಮಂಗಳೂರು, ಮಾ 06(DaijiworldNews/SM): ಕೊರೊನಾ ಹೆಸರು ಕೇಳುತ್ತಿದ್ದಂತೆ ಒಮ್ಮೆ ಎಲ್ಲರಲ್ಲೂ ನಡುಕವನ್ನುಂಟು ಮಾಡುತ್ತದೆ. ಅಷ್ಟರ ಮಟ್ಟಿಗೆ ಕೊರೊನಾ ವಿಶ್ವವನ್ನು ವ್ಯಾಪಿಸುತ್ತಿದೆ. ಕೊರೊನಾ ಮಹಾಮಾರಿ ಜಗತ್ತನ್ನೇ ತಲ್ಲಣಗೊಳಿಸುತ್ತಿದೆ. ಇದರ ನೇರ ಎಫೆಕ್ಟ್ ಹಲವು ಉದ್ಯಮಗಳು, ಕಾರ್ಯಕ್ರಮಗಳ ಮೇಲೆ ಬೀಳುತ್ತಿದೆ. ಯಾವುದೇ ತೊಂದರೆಯಾಗದಿದ್ದರೂ ಇದರ ಎಫೆಕ್ಟ್ ಕುಕ್ಕುಟೋದ್ಯಮಕ್ಕೆ ತಟ್ಟಿದೆ. ದಿನಗಳು ಉರುಳಿದಂತೆ ಕೋಳಿ ಮಾಂಸದ ದರದಲ್ಲಿ ಗಣನೀಯ ಇಳಿಕೆಯಾಗುತ್ತಿದೆ.
ಆದರೆ, ಕೋಳಿ ಮಾಂಸ ಪ್ರಿಯರ ಸಂಖ್ಯೆಯೂ ಕೂಡ ಅದಕ್ಕೆ ಸಮಾನವಾಗಿ ಕುಸಿಯುತ್ತಿದೆ. ಯಾರೋ ಹರಡಿಸಿದ ಗುಮಾನಿಗಳಿಂದಾಗಿ ಕುಕ್ಕುಟೋದ್ಯಮಕ್ಕೆ ಬಲವಾದ ಏಟು ಬಿದ್ದಂತಾಗಿದೆ. ಕೋಳಿ ದರ ಕುಸಿಯುತ್ತಿದ್ದರೂ ಭೀತಿಯಿಂದಾಗಿ ಮಾಂಸ ಸೇವಿಸಲು ಜನಸಾಮಾನ್ಯರು ಯೋಚಿಸುವ ಪರಿಸ್ಥಿತಿ ಎದುರಾಗಿದೆ. ಆದರೆ, ಇದರಿಂದ ಯಾವುದೇ ತೊಂದರೆ ಇಲ್ಲ ಎಂಬುವುದಾಗಿ ಈಗಾಗಲೇ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಕರಾವಳಿಯಲ್ಲಿರುವ ಮಾಂಸ ಮಾರಾಟಗಾರಿಗೂ ಬೆಲೆ ಕುಸಿತ ಸಂಕಷ್ಟಕ್ಕೆ ಕಾರಣವಾಗಿದೆ.
ಗಗನಮುಖಿಯಾಗುತ್ತಿದೆ ಮತ್ಸ್ಯೋದ್ಯಮ:
ಕೊರೊನಾ ಸೃಷ್ಠಿಸಿರುವ ಆತಂಕದಿಂದಾಗಿ ಇತ್ತ ಕುಕ್ಕುಟೋದ್ಯಮ ಸಂಕಷ್ಟದಲ್ಲಿದ್ದರೆ, ಅತ್ತ ಮತ್ಸ್ಯೋದ್ಯಮ ಭರ್ಜರಿ ಬೇಟೆಯಾಡುತ್ತಿದೆ. ಮೀನಿನ ದರ ಗಣನೀಯ ಹೆಚ್ಚಳಾವಾಗಿದ್ದು, ಗಗನಕ್ಕೇರಿದೆ. ಕಡಲ ಕಿನಾರೆಯಲ್ಲಿದ್ದರೂ ಕೂಡ ಇತ್ತೀಚಿನ ದಿನಗಳಲ್ಲಿ ಮತ್ಸ್ಯ ಪ್ರಿಯರಿಗೆ ಅಗ್ಗದ ಧರದಲ್ಲಿ ಮೀನು ಸಿಗುತ್ತಿಲ್ಲ. ಕಡಲ ಮಕ್ಕಳು ಹೆಕ್ಕಿ ತರುವ ಮೀನಿನ ದರ ಗಗನಕ್ಕೆ ಚಿಮ್ಮಿದೆ. ಸಾಮಾನ್ಯವಾಗಿ ಎಲ್ಲಾ ವರ್ಗದ ಜನರೂ ಸವಿಯುವ ಬಂಗುಡೆ ಬೂತಾಯಿ ಧರ ಗಗನಕ್ಕೇರಿದೆ. ಈ ನಡುವೆ ಕರೋನಾ ವದಂತಿಗೆ ಸಿಲುಕಿ ಕೋಳಿ ಧರದದಲ್ಲಿ ಬಾರೀ ಇಳಿಕೆಯಾಗಿದ್ರೂ ಯಾರೂ ಕೂಡ ಕೋಳಿ ಅಂಗಡಿಯತ್ತ ಸುಳಿಯದಿರುವುದು ಮತ್ತಷ್ಟು ಮೀನಿನ ದರ ಏರಿಕೆಗೆ ಕಾರಣವಾಗಿದೆ.
ಮೀನು ಬೆಲೆ ಗಗನಕ್ಕೇರಿದ್ದರಿಂದ ಕರಾಳಿಯಲ್ಲೇ ಮೀನಿಗೆ ಕೊರತೆ ಎದುರಾಗಿದೆ. ಕಳೆದೆರಡು ವಾರದಿಂದ ಕೋಳಿ ಮಾಂಸ ಮತ್ತು ಮೊಟ್ಟೆ ಧರದಲ್ಲಿ ಬಹಳಷ್ಟು ಇಳಿಕೆಯಾಗಿದೆ. ರಾಷ್ಟ್ರವನ್ನ ಕಾಡುತ್ತಿರುವ ಮಹಾಮಾರಿ ಕರೋನಾ ಭೀತಿಯಿಂದ ಕೋಳಿ ಧರ ಪಾತಾಳಕ್ಕಿಳಿಯುತ್ತಿದೆ. ಇದರ ನೇರ ಪರಿಣಾಮ ಮತ್ಸೋದ್ಯಮದ ಮೇಲೆ ತಟ್ಟಿದೆ. ಮೀನು ಖರೀಧಿಸುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ದರ ಹೆಚ್ಚಳದ ಬಿಸಿ ತಟ್ಟಿದೆ.
ಬಂಗುಡೆ ದರ 300, ಭೂತಾಯಿಗೆ 200, ಅಂಜಲ್ ಸಿಗಡಿ ಮಾಂಜಿ ಸಾವಿರದ ಗಡಿ ತಲುಪುವ ನಿರೀಕ್ಷೆ ಇದೆ. ಸಾಮಾನ್ಯ ಜನ ಮೀನು ಖರೀದಿಸಲಾಗದಷ್ಟು ದರ ಏರಿಕೆ ಕಾಣುತ್ತಿದ್ದು ಇದಕ್ಕೆ ಕೊರೊನಾ ಭೀತಿ ಒಂದು ಕಾರಣವಾಗಿದ್ರೆ, ಕಡಲಿನಲ್ಲಿ ಉಂಟಾದ ಮತ್ಸ್ಯಕ್ಷಾಮ ಕೂಡ ಮೀನು ದರ ಗಗನಕ್ಕೇರಲು ಕಾರಣವಾಗಿದೆಯಂತೆ. ಏರಿದ ದರದಿಂದಾಗಿ ಮೀನು ಪ್ರಿಯರಿಗೆ ಮುಳ್ಳು ಚುಚ್ಚುತ್ತಿದ್ದರೆ, ಕೊರೊನಾ ಭೀತಿಯಿಂದ ಕೋಳಿ ಮಾಂಸದಿಂದ ದೂರವಾಗುತ್ತಿದ್ದು, ತರಕಾರಿಯತ್ತ ಮುಖಮಾಡುವಂತಾಗಿದೆ.
ಒಟ್ಟಿನಲ್ಲಿ ಕರಾವಳಿಗರ ನಿತ್ಯದ ಆಹಾರ ಮೀನಿಗೆ ಬೆಲೆ ಏರಿಕೆ, ಮತ್ಸ್ಯಕ್ಷಾಮದ ಮೂಲಕ ಹೊಡೆತ ಬಿದ್ದಿದ್ದು ಅಳಿದುಳಿದ ಮೀನುಗಳಿಗೆ ಧಕ್ಕೆಯಲ್ಲಿ ಜನ ಮುಗಿ ಬೀಳುತ್ತಿದ್ದಾರೆ. ಕೊರೊನಾ ಭೀತಿ ಇದೇ ರೀತಿ ಮುಂದುವರಿದಿದ್ದೇ ಆದಲ್ಲಿ ಮೀನಿನ ಧರ ಮತ್ತಷ್ಟು ಗಗನಕ್ಕೇರಲಿದ್ದು, ಕುಕ್ಕುಟೋದ್ಯಮ ನಷ್ಟದತ್ತ ಮುಖಮಾಡುವುದರಲ್ಲಿ ಸಂಶಯವಿಲ್ಲ.