ಬಂಟ್ವಾಳ ಮಾ 06(DaijiworldNews/SM): ಬಿಸಿರೋಡಿನ ಮಿನಿ ವಿಧಾನ ಸೌಧ ಕಚೇರಿಯ ಸಮೀಪ ಇಂದಿರಾ ಕ್ಯಾಂಟೀನ್ ಮುಂಭಾಗದಲ್ಲಿ ಅನಧಿಕೃತ ವಾಗಿ ತಳ್ಳುಗಾಡಿಗಳನ್ನು ಇಟ್ಟು ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿ ಗಳನ್ನು ತಹಶೀಲ್ದಾರ್ ರಶ್ಮಿ ಎಸ್. ಆರ್.ಅವರ ಸೂಚನೆಯಂತೆ ಟ್ರಾಫಿಕ್ ಎಸ್.ಐ.ರಾಜೇಶ್ ಅವರು ತೆರವುಗೊಳಿಸಿದ್ದಾರೆ. ಜೊತೆಗೆ ಈ ರಸ್ತೆಯಲ್ಲಿ ಯಾರು ಕೂಡಾ ಬೀದಿ ವ್ಯಾಪಾರಿಗಳು ಪುನರಾವರ್ತಿತವಾಗಿ ವ್ಯಾಪಾರ ಮಾಡದಂತೆ ಟ್ರಾಫಿಕ್ ಪೋಲೀಸರನ್ನು ನಿಯೋಜಿಸಿದ್ದಾರೆ.
ಈ ರಸ್ತೆಯಲ್ಲಿ ನ್ಯಾಯಾಲಯ, ಮಿನಿವಿಧಾನ ಸೌಧ, ಶಾಸಕರ ಕಚೇರಿ ಸಹಿತ ಅನೇಕ ಸರಕಾರಿ ಕಚೇರಿಗಳಿಗೆ ಸಂಚಾರ ಮಾಡಬೇಕಾಗಿದೆ. ಹಾಗಾಗಿ ಅಧಿಕಾರಿಗಳ ಸಹಿತ ಸಾರ್ವಜನಿಕರಿಗೆ ಬೀದಿ ಬದಿ ವ್ಯಾಪರಿಗಳಿಂದ ಅನಾನುಕೂಲ ಪರಿಸ್ಥಿತಿ ನಿರ್ಮಾಣ ವಾಗಿತ್ತು.ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಪರದಾಡುವ ಬಿಸಿರೋಡಿನ ಜನತೆಗೆ ಬೀದಿಬದಿ ವ್ಯಾಪಾರಿಗಳ ವ್ಯಾಪಾರದಿಂದ ಸಾಕಷ್ಟು ತೊಂದರೆಯಾಗುತ್ತಿತ್ತು ಎಂದು ಸಾರ್ವಜನಿಕರ ದೂರಾಗಿತ್ತು.ಅಂತೂ ಕೊನೆಗೂ ತಹಶೀಲ್ದಾರ್ ಸೂಚನೆಯಂತೆ ಪೋಲೀಸರಿಂದ ಬೀದಿ ವ್ಯಾಪಾರಿಗಳ ತೆರವು ಕಾರ್ಯಚರಣೆ ನಡೆದಿದೆ. ಮತ್ತೆ ಯಾವಾಗ ತಳ್ಳು ಗಾಡಿಗಳು ಇದೇ ಸ್ಥಳವನ್ನು ಆಶ್ರಯಿಸುತ್ತದೆ ಅನ್ನುವುದು ಗೊತ್ತಿಲ್ಲ, ಸದ್ಯಕ್ಕೆ ರಸ್ತೆ ಕ್ಲೀಯರ್ ಅಗಿದೆ.