ಕಾರ್ಕಳ, ಮಾ 07 (DaijiworldNews/MSP): ಶಂಕಿತ ಕೊರೊನಾ ವೈರಸ್ ಹಿನ್ನಲೆಯಲ್ಲಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿರುವ ಕಾರ್ಕಳ ಮುನಿಯಾಲು ವ್ಯಕ್ತಿಯ ವೈದ್ಯಕೀಯ ಪರೀಕ್ಷಾ ವರದಿ ಆಸ್ಪತ್ರೆ ತಲುಪಿದ್ದು ವರದಿಯಲ್ಲಿ ನೆಗೆಟಿವ್ ರಿಪೋರ್ಟ್ ಬಂದಿರುವುದು ಆತಂಕ ದೂರವಾಗಿದೆ.
ಇಸ್ರೇಲ್ ಪ್ರವಾಸ ಮುಗಿಸಿ ತಮ್ಮೂರಿಗೆ ವಾಪಾಸ್ ಆಗಿದ್ದ 75 ವರ್ಷದ ವ್ಯಕ್ತಿ ಕೆಮ್ಮು ಹಾಗೂ ಶೀತದ ತೊಂದರೆಯಿಂದ ಬಳಲುತ್ತಿದ್ದರು. ವಿದೇಶ ಪ್ರವಾಸದ ಹಿನ್ನಲೆ ಹಾಗೂ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆ ತಪಾಸಣೆಗಾಗಿ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು
ರೋಗಿಯ ಗಂಟಲಿನ ದ್ರವ (ಥ್ರೋಟ್ ಸ್ವಾಬ್) ನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿತ್ತು. ಈ ನಡುವೆ ರೋಗಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿತ್ತು. ವರದಿಯ ಆಧಾರದ ವ್ಯಕ್ತಿಯನ್ನು ಮನೆಗೆ ಕಳುಹಿಸುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದರು. ಇದೀಗ ವರದಿ ಜಿಲ್ಲಾಸ್ಪತ್ರೆ ವೈದ್ಯರ ಕೈ ಸೇರಿದ್ದು, ಆತಂಕ ನಿವಾರಣೆಯಾಗಿದೆ.