ಬಂಟ್ವಾಳ,ಸೆ.02: ಶರತ್ ಮಡಿವಾಳ ಹತ್ಯೆ ಪ್ರಕರಣದ ಆರೋಪಿ ಖಲಂದರ್ ಮನೆಯಲ್ಲಿ ಪೊಲೀಸರು ಪರಿಶೀಲನೆ ನಡೆಸುವ ವೇಳೆ ದಾಂಧಲೆ ನಡೆಸಿದ್ದಾರೆ ಎಂದು ಆರೋಪಿ ಖಲಂದರ್ ಮನೆಯವರು ಆರೋಪಿಸಿದ್ದಾರೆ. ಇಂದು ಬೆಳಿಗ್ಗೆ ಪರಿಶೀಲನೆಗೆಂದು ಮನೆಗೆ ಬಂದ ಪೊಲೀಸರು, ಕುರಾನ್ ಎಸೆದು, ಮದರಸ ಪುಸ್ತಕವನ್ನು ಹರಿದು ಮನೆ ಜಾಲಾಡಿದ್ದಾರೆ. ಅಲ್ಲದೆ ಮಗ ಕೊಟ್ಟ ೧ ಕೋಟಿ ಹಣ ಎಲ್ಲಿದೆ ಎಂದು ಬೆಡ್ ಹರಿದು ಹಾಕಿದ್ದಾರೆ, ಕುರಾನ್ ಮುಟ್ಟಬೇಡಿ ಎಂದು ವಿನಂತಿಸಿದರೂ ದಾಂಧಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.