ಕಾಸರಗೋಡು, ಮಾ 9 (Daijiworld News/MSP): ಕೊರೋನಾ ವೈರಸ್ ಒಂದೆಡೆ ಇನ್ನೊಂದೆಡೆ ಹಕ್ಕಿ ಜ್ವರದ ಪರಿಣಾಮ ಕೋಳಿ ಉದ್ಯಮ ಅತಂತ್ರಕ್ಕೆ ಸಿಲುಕಿದೆ. ಕೋಳಿ ಬೆಲೆ ದಾಖಲೆ ಪ್ರಮಾಣದಲ್ಲಿ ಇಳಿಕೆಯಾಗಿದೆ ದಶಕದ ಬಳಿಕ ಬೆಲೆ ಇಳಿಕೆ ಕಂಡಿದೆ. ತಿಂಗಳ ಹಿಂದೆ ಒಂದು ಕೆ . ಜಿ ಮಾಂಸದ ಕೋಳಿ ಗೆ ಇದೀಗ 40 ರೂ. ತನಕ ಬೆಲೆ ಇಳಿಕೆಯಾಗಿದೆ .
ಎರಡು ದಿನಗಳ ಲ್ಲಿ ಕೆ . ಜಿ ವೊಂದಕ್ಕೆ 90 ರೂ . ನಷ್ಟು ಇಳಿಕೆ ಕಂಡಿದೆ. ಕಳೆದ ಕೆಲ ವರ್ಷಗಳಿಂದ 100 ರೂ. ಗಳ ಗಡಿಯಲ್ಲೇ ಸಾಗುತ್ತಿದ್ದ ಬೆಲೆ ಕೇರಳದಲ್ಲಿ ಹಕ್ಕಿ ಜ್ವರ ವರದಿಯಾಗುತ್ತಲೇ ದಿಡೀರನೆ ಕುಸಿದು 40 ರ ಗಡಿ ಬಂದು ತಲಪಿದೆ.
ರೋಗ ಹರಡುವ ಭಯದಿಂದ ಗ್ರಾಹಕರು ಕೋಳಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಕೋಳಿ ಮಾಂಸ ತಿಂದರೆ ಕೊರೋನಾ ವೈರಸ್ ಬರುವ ಆತಂಕ ಗ್ರಾಹಕರದ್ದಾಗಿದೆ. ಒಂದೆಡೆ ಪೌಷ್ಟಿಕ ಆಹಾರದ ಕೊರತೆ, ಇನ್ನೊಂದೆಡೆ ಕೋಳಿ ಮಾರಾಟ ದರ ಇಳಿಕೆಯಿಂದ ಕೋಳಿ ಸಾಕಾಣಿಕೆದಾರರು ಆರ್ಥಿಕ ನಷ್ಟವನ್ನು ಅನುಭವಿಸು ವಂತಾಗಿದೆ.