ಮಂಗಳೂರು, ಫೆ 16: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಫೆ.24 ರಿಂದ ಮುಂಬೈ ಕರ್ನಾಟಕದಲ್ಲಿ ಸಂಚರಿಸಿದ ನಂತರ, ಮೂರನೇ ಹಂತದಲ್ಲಿ ಅಂದರೆ ಮಾರ್ಚ್ ನಲ್ಲಿ ಕರಾವಳಿಗೆ ಕಾಲಿಡಲಿದ್ದಾರೆ.
ರಾಹುಲ್ ಗಾಂಧಿ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ನಡೆಸಲಿದ್ದು, 4 ದಿನಗಳ ಕಾಲ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಕರಾವಳಿಯಲ್ಲಿ ಬೇರೆ ಬೇರೆ ಕಡೆ ರೋಡ್ ಶೋ, ಮತ್ತು ಸಾರ್ವಜನಿಕರ ಸಭೆಗಳಲ್ಲಿ ರಾಹುಲ್ ಭಾಗವಹಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಿಗೂ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿದ್ದು, ಅವರೊಂದಿಗೆ ರಾಜ್ಯ ಹಾಗು ರಾಷ್ಟ್ರಮಟ್ಟದ ನಾಯಕರು ಭಾಗಿಯಾಗಲಿದ್ದಾರೆ.
ರಾಹುಲ್ ಗಾಂಧಿ ಅವರಿಗೆ ಹೈದರಾಬಾದ್ ಕರ್ನಾಟಕದಲ್ಲಿ ಮಿರ್ಚಿ, ಮಂಡಕ್ಕಿ ರುಚಿಯನ್ನು ಪರಿಚಯಿಸಿದ್ದರು. ಇದೀಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಗೋಳಿಬಜೆ, ಪತ್ರೊಡೆ, ಕಲ್ಲಡ್ಕ ಕೆಟಿ ಮುಂತಾದ ಕರಾವಳಿಯ ತಿನಿಸುಗಳ ರುಚಿಯನ್ನು ಪರಿಚಯಿಸಲಿದ್ದಾರೆ.