ಸುಳ್ಯ, ಮಾ 10 (Daijiworld News/MSP): ಸುಳ್ಯ ಹಾಲು ಹಿಂಡುವ ಯಂತ್ರ ಸಂಶೋಧನೆಯ ಮೂಲಕ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ನಿವೃತ್ತ ಶಿಕ್ಷಕ ರಾಘವ ಗೌಡ ಪಲ್ಲತ್ತಡ್ಕ ಸೋಮವಾರ ತಡರಾತ್ರಿ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಅಗಲಿದ ರಾಘವ ಗೌಡರ ಅಂತ್ಯ ಸಂಸ್ಕಾರವು ಮಂಗಳವಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.ಹಾಲು ಕರೆಯುವ ಯಂತ್ರ ಸೇರಿದಂತೆ ಹಲವು ಆಧುನಿಕ ಆವಿಷ್ಕಾರಗಳನ್ನು ಸಂಶೋಧಿಸಿರುವ ರಾಘವ ಗೌಡರು ಈ ಕಾರ್ಯಕ್ಕೆ 2005 ರಲ್ಲಿ ಆಗಿನ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಇವರಿಂದ ರಾಷ್ಟ್ರಪತಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ಹಳ್ಳಿಯಲ್ಲಿದ್ದುಕೊಂಡೇ ತನ್ನ ಸಂಶೋಧನೆಯನ್ನು ಜಗತ್ತಿನಲ್ಲಿ ಹರಡುವಂತೆ ಮಾಡಿ, ಹೈನುಗಾರಿಕೆಯನ್ನು ಆಧುನೀಕರಣಕ್ಕೆ ಮುಂದಾಗಿದ್ದರು.