ಉಳ್ಳಾಲ, ಮಾ 10 (DaijiworldNews/SM): ತಾಲೂಕಿನ ದೇರಳಕಟ್ಟೆ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದ ಯುವತಿ ನಾಪತ್ತೆಯಾಗಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ ಕುಂಭಾಷಿ ಆನೆಗುಡ್ಡೆ ದೇವಸ್ಥಾನ ಬಳಿಯ ನಿವಾಸಿ ನಾಪತ್ತೆಯಾದ ಯುವತಿ. ಈಕೆ ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮಾರ್ಚ್ 8ರಂದು ಆಸ್ಪತ್ರೆಯ ಹಾಸ್ಟೆಲ್ ಗೆ ಹೋಗಿ ಅಲ್ಲಿಂದ ರಾತ್ರಿ 8ಕ್ಕೆ ಆಕೆಯ ದೊಡ್ಡಮ್ಮ ಜತೆಯಲ್ಲಿ ಊರಿಗೆ ಹೋಗುವುದಾಗಿ ತಿಳಿಸಿ ಹೊರಟಿದ್ದರು. ಆದರೆ ಮನೆಗೆ ಆಕೆ ತಲುಪದೇ ಇರುವುದರಿಂದ, ತಾಯಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.