ಉಡುಪಿ, ಮಾ. 11 (Daijiworld News/MB) : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಹಾಗೂ ಪೊಲೀಸ್ ಉಪ ಅಧೀಕ್ಷಕ ಜೈ ಶಂಕರ್ ಅವರಿಗೆ 2017 ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಲಭಿಸಿದೆ.
ಜನವರಿಯಿಂದ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಷ್ಣವರ್ಧನ್ ಅವರು 2005 ರಲ್ಲಿ ಇಲಾಖೆ ಸೇವೆಗೆ ಸೇರಿ ಕೊಡಗಿನ ಡಿವೈಎಸ್ಪಿಯಾಗಿ ಕರ್ತವ್ಯ ಆರಂಭಿಸಿದ್ದರು. 2015 ರಲ್ಲಿ ಐಪಿಎಸ್ ಹುದ್ದೆಗೆ ಭಡ್ತಿ ಪಡೆದಿದ್ದರು. 2016 ರಲ್ಲಿ ಉಡುಪಿ ಹೆಚ್ಚುವರಿ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು.
1996 ರಲ್ಲಿ ಪೊಲೀಸ್ ಸೇವೆ ಆರಂಭಿಸಿದ್ದ ಜೈಶಂಕರ್ ಅವರು, ಕರಾವಳಿ ಕಾವಲು ಪಡೆ, ಡಿಸಿಆರ್ಬಿ ಸಹಿತ ವಿವಿಧೆಡೆ ಕಾರ್ಯನಿರ್ವಹಿಸಿ 2019 ರಿಂದ ಉಡುಪಿ ವಿಭಾಗದ ಡಿವೈಎಸ್ಪಿಯಾಗಿದ್ದಾರೆ.