ಮಂಗಳೂರು, ಮಾ. 11 (Daijiworld News/MB) : ಕರ್ನಾಟಕ ರಾಜ್ಯಾದ್ಯಂತ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಆಯೋಜಿಸಿದ್ದ ಇಸ್ಕಾನ್ ಶ್ರೀಕೃಷ್ಣ ರಥಯಾತ್ರೆ ಮುಂದೂಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಇಸ್ಕಾನ್ ಮಂಗಳೂರು ಕಾರ್ಯದರ್ಶಿ ಸನಂದನದಾಸ್ ಅವರು, "ಮಂಗಳೂರಿನಲ್ಲಿ ಮಾ.14ರಂದು ಆಯೋಜಿಸಲಾಗಿದ್ದ ಶ್ರೀಕೃಷ್ಣ ರಥಯಾತ್ರೆ ಮುಂದೂಡಲಾಗಿದೆ" ಎಂದು ತಿಳಿಸಿದ್ದಾರೆ.
"ಈ ಯಾತ್ರೆಗೆ ಹೈದರಾಬಾದ್, ಚೆನ್ನೈ, ಮುಂಬೈ ಸೇರಿ ವಿವಿಧ ರಾಜ್ಯದ 600 ಮಂದಿ ಭಾಗವಹಿಸಲಿದ್ದರು" ಎಂದು ಹೇಳಿದ್ದಾರೆ.