ಸುಳ್ಯ, ಮಾ.11 (DaijiworldNews/SM): ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತೋಡಿಕಾನದಿಂದ-ಮುಪ್ಪಸೇರು, ಕುದುರೆಪಾಯ, ಮಾಪಳಕಜೆ ಸಂಪರ್ಕ ಕಲ್ಪಿಸುವ ತೊಡಿಕಾನ ದೇವಾಲಯ ಬಳಿಯ ಮತ್ಸ್ಯ ತೀರ್ಥ ಹೊಳೆಗೆ ಕಿರು ಸೇತುವೆ ನಿರ್ಮಾಣದ ಕಾಮಗಾರಿಗೆ ಕೊನೆಗೂ ಚಾಲನೆ ದೊರಕಿದೆ.
ಮುಪ್ಪಸೇರು-ಮಾಪಳಕಜೆ-ಕುದರೆಪಾಯ ಸಂಪರ್ಕ ರಸ್ತೆಯ ಮತ್ಸ್ಯ ತೀರ್ಥ ಹೊಳೆಗೆ ಸೇತುವೆ ನಿರ್ಮಾಣದ ಬೇಡಿಕೆ ಈ ಭಾಗದ ಜನರ ಹಲವು ದಶಕಗಳ ಬೇಡಿಕೆಯಾಗಿತ್ತು.ಆದರೆ ಸೇತುವೆ ನಿರ್ಮಾಣವಾಗದರಿರುವುದರಿಂದ ಮಳೆಗಾಲದಲ್ಲಿ ಈ ಭಾಗದ ಜನರು ಸಮಸ್ಯೆಗೊಳಗಾಗಿದ್ದಾರೆ.ಈ ಸಮಸ್ಯೆಯ ಬಗ್ಗೆ ಹಲವು ಬಾರಿ ಡೈಜಿ ವಲ್ಡ್ ಚಾನೆಲ್ನಲ್ಲಿ ವರದಿ ಮಾಡಲಾಗಿತ್ತು.