ಕಾಸರಗೋಡು, ಮಾ.11 (DaijiworldNews/SM): ನಗರದ ಬದ್ರಿಯಾ ಹೋಟೆಲ್ ಬಳಿ ನಿಲ್ಲಿಸಿದ್ದ ಕಾರಿನಿಂದ 3 ಲಕ್ಷ ರೂ ಕಳವುಗೈದ ಘಟನೆ ನಡೆದಿದೆ. ಚೆಂಗಳದ ಷರೀಫ್ ಎಂಬವರು ಕಾರು ನಿಲ್ಲಿಸಿ ಹಣ್ಣು ಹಂಪಲು ಖರೀದಿಸಲು ತೆರಳಿದ ಸಂದರ್ಭದಲ್ಲಿ ಕಾರಿನಿಂದ ನಗದು ನಾಪತ್ತೆಯಾಗಿದೆ, ಹಣ್ಣು ಖರೀದಿಸಿ ಮರಳಿ ಕಾರಿನ ಬಳಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.
ಕೆಲವೇ ನಿಮಿಷಗಳ ಅಂತರದಲ್ಲಿ ಕಾರಿನ ಮುಂದಿನ ಸೀಟಿನಲ್ಲಿ ಇರಿಸಲಾಗಿದ್ದ 3 ಲಕ್ಷ ರೂ ಹಣ ಕಳವುಗೈದಿದ್ದಾರೆ. ಸ್ಥಳಕ್ಕೆ ಕಾಸರಗೋಡು ನಗರ ಠಾಣಾ ಪೊಲೀಸರು ಆಗಮಿಸಿದೆ ಪರಿಶೀಲನೆ ನಡೆಸಿ, ತನಿಖೆ ಆರಂಭಿಸಿದ್ದಾರೆ.