ಮಂಗಳೂರು, ಮಾ. 12 (Daijiworld News/MB) : ದಕ್ಷಿಣ ಕನ್ನಡದ ಖ್ಯಾತ ಟೆಕ್ಸ್ಟೈಲ್ ಬ್ರಾಂಡ್ ಜಯಲಕ್ಷ್ಮೀ ಫ್ಯಾಮಿಲಿ ಫ್ಯಾಶನ್ ಸ್ಟೋರ್ನ ಮೆಗಾ ಶೋರೂಂ ನಗರದ ಬಿಜೈನಲ್ಲಿ ಗುರುವಾರ ಶುಭಾರಂಭಗೊಂಡಿತು.
ನೂತನ ಶೋರೂಂನ್ನು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹಮದ್ ಮುಸ್ಲಿಯಾರ್ ಹಾಗೂ ಶಾಸಕ ವೇದವ್ಯಾಸ್ ಕಾಮತ್ ಅವರು ಗುರುವಾರ ಉದ್ಘಾಟನೆ ಮಾಡಿದರು.
ಈ ನೂತನ ಶೋರೋಂನ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ಮಾಲಕರಾದ ಎನ್. ನಾರಾಯಣ ಕಾಮತ್, ಎನ್.ಗೋವಿಂದ ಕಾಮತ್, ಎನ್.ಸತೀಶ್ ಕಾಮತ್, ಮತ್ತು ಕುಟುಂಬಸ್ಥರು ಮೇಯರ್ ದಿವಾಕರ್ ಪಾಂಡೇಶ್ವರ, ಮೀನಾಕ್ಷಿ ಶಾಂತಿಗೋಡು, ಅಧ್ಯಕ್ಷರು, ಜಿ.ಪಂ, ಜೆ.ಆರ್.ಲೋಬೊ,ಮಾಜಿ ಶಾಸಕರು, ಅಬ್ದುಲ್ ರವೂಫ್ ವಿಪಕ್ಷ ನಾಯಕರು, ಕಾರ್ಪೊರೇಟರ್ ಸುದೀರ್ ಶೆಟ್ಟಿ, ಭಾರತ್ ಮಾಲ್ ಸಂಸ್ಥೆಯ ಪಾಲುದಾರಗಳಾದ ಆನಂದ ಪೈ, ಸುಬ್ರಾಯ ಪೈ, ಸುದೀರ್ ಪೈ, ವೆಂಕಟೇಶ ಪೈ, ಜಯಲಕ್ಷ್ಮಿ ಸಂಸ್ಥೆಯ ಸ್ಟೋರ್ ಮೆನೇಜರ್ಗಳಾದ ಅನೀಶ್, ಅಜಿತ್, ರಾಜೀವ್ ತ್ರಿ ವೆಡ್ರಮ್, ಮಂಗಳೂರು ಸ್ಟೋರ್ ಮ್ಯಾನೇಜರ ರಾಜೇಂದ್ರ ಉಳ್ಳಾಲ ಉಪಸ್ಥಿತರಿದ್ದರು.
ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.
ವಧುವಿನ ಉಡುಪುಗಳಿಗೆ ಸಾಕ್ಷಿಯಾಗಿರುವ ಈ ಜಯಲಕ್ಷ್ಮೀ ಮೆಗಾ ಶೋರೂಂ ದೇಶದಲ್ಲಿ ತನ್ನ ಐದನೇ ಶೋರೂಂನ್ನು ಪ್ರಾರಂಭಿಸಿದೆ. ಒಟ್ಟು 1 ಲಕ್ಷ ವಿಸ್ತೀರ್ಣವನ್ನು ಹೊಂದಿರುವ ಹೊಸ ಮೆಗಾ ಶೋ ರೂಂ ಕರ್ನಾಟಕದಲ್ಲಿ ದೊಡ್ಡದಾದ ಶೋರೂಂ ಆಗಿದೆ. ನಾಲ್ಕು ಮಹಡಿಯ ಈ ಬೃಹತ್ ಶೋರೂಂನಲ್ಲಿ ಅತ್ಯುತ್ತಮವಾದ ಉಡುಪುಗಳು ಮತ್ತು ವಧುವಿನ ಉಡುಗೆಗಳನ್ನು ದೊರೆಯುತ್ತದೆ.
ವಧುವಿನ ಸೀರೆಗಳು, ಡಿಸೈನರ್ ಉಡುಗೆಗಳು, ಪುರುಷರ ಉಡುಪುಗಳಿಂದ ಹಿಡಿದು ಮಕ್ಕಳ ಉಡುಗೆಗಳವರೆಗೆ ಈ ಶೋರೂಂನಲ್ಲಿ ದೊರೆಯುತ್ತದೆ. ಹಾಗೆಯೇ ಅತ್ಯುತ್ತಮ ಕ್ವಾಲಿಟಿಯ ಹೊಸ ಟ್ರೆಂಡ್ನ ಉಡುಪುಗಳು ಇಲ್ಲಿ ಲಭ್ಯವಿದೆ.
ನೆಲಮಾಳಿಗೆಯಲ್ಲಿರುವ ಎರಡು ಮಹಡಿಗಳನ್ನು ಪಾರ್ಕಿಂಗ್ಗಾಗಿ ಕಾಯ್ದಿರಿಸಲಾಗಿದ್ದು ಇದರಲ್ಲಿ ಸುಮಾರು 250 ವಾಹನಗಳನ್ನು ನಿಲ್ಲಿಸಬಹುದಾಗಿದೆ.
ಅಷ್ಟು ಮಾತ್ರವಲ್ಲದೇ ಈ ಶೋರೂಂನಲ್ಲಿ ಮಕ್ಕಳಿಗೆ ಮೋಜನ್ನು ನೀಡಲು ಆಟದ ಸ್ಥಳವನ್ನು ಮೀಸಲಿಡಲಾಗಿದೆ. ವಿನೂತನ ಶೈಲಿಯ, ಉತ್ತಮ ಉಡುಗೆಗಳನ್ನು ಒದಗಿಸುವ ಜಯಲಕ್ಷ್ಮಿ ಮೆಗಾ ಶೋರೂಂ ಶಾಪಿಂಗ್ ಮಾಡುವ ಭರವಸೆಯನ್ನು ನೀಡುತ್ತದೆ.
ಜವಳೀ ಕ್ಷೇತ್ರದಲ್ಲಿ ತನ್ನ 7 ದಶಕಗಳ ಪರಿಣಿತಿ ಹೊಂದಿರುವ ಜಯಲಕ್ಷ್ಮೀ ಭಾರತೀಯ, ಸಾಂಪ್ರದಾಯಿಕ ಮತ್ತು ಪಾಶ್ಚಾತ್ಯ, ಫ್ಯಾಶನ್ ವಸ್ತ್ರೋದ್ಯಮದಲ್ಲಿ ಅಪಾರ ಅನುಭವ ಹೊಂದಿದ್ದು ಪ್ರತಿಯೊಂದು ವಿಭಾಗದ ಜನರ ಅಭೀರುಚಿಯನ್ನು ಪೂರೈಸಲು ಸಜ್ಜಾಗಿದೆ. ನವ ವಿನ್ಯಾಸದೊಂದಿಗೆ ನೂತನ ಕಲ್ಪನೆಯೊಂದಿಗೆ ವಿನ್ಯಾಸಗೊಳಿಸಿರುವ ವಿಶಾಲವಾದ ಶೋರೂಂ, ಪ್ರತಿಯೊಬ್ಬ ಗ್ರಾಹಕರ ಕಾಳಜಿ ವಹಿಸಲು ೫೦೦ ಕ್ಕೂ ಅಧಿಕ ಹರ್ಷಚಿತ್ತ ಉತ್ಸಾಹಿ ಸಿಬ್ಬಂದಿ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಪ್ರಕ್ರಿಯೆಗಳು ಗ್ರಾಹಕರಿಗೆ ಅಂತರ್ ರಾಷ್ಟ್ರೀಯ ಶಾಪಿಂಗ್ ಅನುಭವವನ್ನು ನೀಡುತ್ತದೆ.
ಜಯಲಕ್ಷ್ಮೀ ಬಗ್ಗೆ
ಜಯಲಕ್ಷ್ಮೀ ಮಳಿಗೆಯನ್ನು 1947 ರಲ್ಲಿ ಕೊಚ್ಚಿನ್ನ ಕ್ಲೋತ್ ಬಜಾರ್ ರಸ್ತೆಯಲ್ಲಿ ದಿವಂಗತ ಆರ್ ನರಸಿಂಹ ಕಾಮತ್ ಸ್ಥಾಪಿಸಿದರು. ಪ್ರಾರಂಭದಲ್ಲಿ 200 ಚದರ ಅಡಿ ಅಳತೆಯ ಸಣ್ಣ ಅಂಗಡಿಯೊಂದಿಗೆ ವ್ಯವಹಾರವು ಆರಂಭವಾಯಿತು.
1997 ರಲ್ಲಿ, ದಿವಂಗತ ಆರ್ ನರಸಿಂಹ ಕಾಮತ್ ಅವರ ಮೂವರು ಪುತ್ರರು - ಎನ್ ನಾರಾಯಣ ಕಾಮತ್, ಎನ್ ಗೋವಿಂದ್ ಕಾಮತ್ ಮತ್ತು ಎನ್ ಸತೀಶ್ ಕಾಮತ್, ಎಂಜಿ ರೋಡ್ ಕೊಚ್ಚಿನ್ನಲ್ಲಿ 60,000 ಚದರ ಅಡಿ ಅತ್ಯಾಧುನಿಕ ಶೋ ರೂಂ ಅನ್ನು ತೆರೆದರು.
15 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ, ಜಯಲಕ್ಷ್ಮಿ ಕೇರಳದಾದ್ಯಂತ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತು. ತಿರುವನಂತಪುರ, ತ್ರಿಶೂರ್ ಮತ್ತು ಕ್ಯಾಲಿಕಟ್ನಲ್ಲಿ ಭವ್ಯವಾದ ಶೋ ರೂಂಗಳನ್ನು ತೆರೆಯಿತು. ಇಂದು, ಬ್ರ್ಯಾಂಡ್ ತನ್ನ ಗುಣಮಟ್ಟದ ಉತ್ಪನ್ನಗಳು, ಅದ್ಭುತ ಸಂಗ್ರಹಗಳು ಮತ್ತು ಪ್ರೀಮಿಯಂ ಸೇವೆಗೆ ಹೆಸರುವಾಸಿಯಾಗಿದೆ.
ಕಳೆದ ಏಳು ದಶಕಗಳಲ್ಲಿ ಲಕ್ಷಾಂತರ ನಿಷ್ಠಾವಂತ ಗ್ರಾಹಕರಿಗೆ ಸೇವೆ ಸಲ್ಲಿಸಿದ ಈ ಬ್ರ್ಯಾಂಡ್ ಗೆ 'ದಿ ಬ್ರೈಡಲ್ ಡೆಸ್ಟಿನೇಶನ್' ಎಂದು ಹೇಳಬಹುದಾಗಿದೆ.