ಕಾಸರಗೋಡು, ಮಾ13( Daijiworld News/MSP): ಕರ್ನಾಟಕದಲ್ಲಿ 76ರ ವೃದ್ದ ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ಬೆನ್ನಲ್ಲೇ ದೇಶವ್ಯಾಪ್ತಿ ಕಳವಳ ವ್ಯಕ್ತವಾಗಿದ್ದು, ಇದೀಗ ಬಹರೈನ್ ನಲ್ಲಿ ದುಡಿಯುತ್ತಿಯುವ ಕಾಸರಗೋಡು ಮೂಲದ ನರ್ಸ್ ಒಬ್ಬರಿಗೆ ಕೊರೋನಾ ಸೋಂಕು ತಗುಲಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ. ಅವರು ತಾವು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬಹರೈನ್ ನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ಯುವತಿ ಯನ್ನು ಐಸೋಲೇಷನ್ ವಾರ್ಡ್ ಗೆ ದಾಖಲಿಸಲಾಗಿದೆ . ಇವರ ಜೊತೆಗಿದ್ದ ತಿರುವನಂತಪುರ ಮೂಲದ ನರ್ಸ್ ಗೂ ಕೊರೋನಾ ಸೋಂಕು ಇರುವುದು ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ