ಮಂಗಳೂರು,ಸೆ18: ಮಂಗಳೂರು ದಸರಾ ಎಂದೇ ಖ್ಯಾತಿ ಪಡೆದಿರುವ ಕುದ್ರೋಳಿ ಗೋಕರ್ಣಾಕ್ಷೇತ್ರ ನವರಾತ್ರಿ ಉತ್ಸವಕ್ಕೆ ಸಜ್ಜಾಗುತ್ತಿದೆ. ಸೆ. 21ರಿಂದ ಆರಂಭವಾಗಿ ಹತ್ತು ದಿನಗಳ ಕಾಲ ನಡೆಯಲಿರುವ ದಸರಾ ಉತ್ಸವವು ಸೆ30 ರಂದು ವೈಭವೋಪೇತ ಮೆರವಣಿಗೆಯೊಂದಿಗೆ ಕೊನೆಗೊಳ್ಳಲಿದೆ. ಈ ಬಾರಿ ಸೆ. 21ರಂದು ಮಧ್ಯಾಹ್ನ12.20ಕ್ಕೆ ಶ್ರೀ ಕ್ಷೇತ್ರದ ಗೋಕರ್ಣನಾಥ ಕಲ್ಯಾಣ ಮಂಟಪದಲ್ಲಿ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿರುವ ವಿಶೇಷ ಮಂಟಪಗಳಲ್ಲಿ ನವದುರ್ಗೆಯರು ಹಾಗೂ ಶಾರದಾ ಮಾತೆಯ ಮಾರ್ತಿಗಳನ್ನು ಸಂಪ್ರದಾಯಿಕ ಹಾಗೂ ವಿಧಿಪೂರ್ಣವಾಗಿ ಪ್ರತಿಷ್ಠಾಪಿಸಲಾಗುವುದು. ಇದರೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆಯಲಿದೆ ಎಂದು ಕೇಂದ್ರ ಮಾಜಿ ಸಚಿವ, ಜರ್ನಾದನ ಪೂಜಾರಿ ಇಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಸೆ. 30 ರಂದು ಸಂಜೆ 4 ಗಂಟೆಗೆ ಶಾರದಾ ಮಾತೆಯ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಮೆರವಣಿಗೆ ಸಾಗುವ 7 ಕಿ.ಮೀ. ದಾರಿಯನ್ನು ಈ ಬಾರಿ ವಿನೂತನ ರೀತಿಯಲ್ಲಿ ೫೦೦ಕ್ಕೂ ಹೆಚ್ಚು ಅಲಂಕಾರಿಕ ಕೊಡೆಗಳಿಂದ ಶೃಂಗಾರಿಸಲಾಗುತ್ತಿದೆ.ಇನ್ನು ಮೆರವಣಿಗೆಯಲ್ಲಿ ರಾಜ್ಯದ ಹಾಗೂ ನೆರೆ ರಾಜ್ಯಗಳಿಂದ ಬರುವ ಸುಮಾರು ೭೫ ಕ್ಕೂ ಹೆಚ್ಚು ಸ್ತಬ್ದ ಚಿತ್ರಗಳು ಪಾಲ್ಗೊಳ್ಳಲಿವೆ.
ಇನ್ನು ಈ ಹತ್ತು ದಿನಗಳ ಕಾಲ ಸಂಜೆ6 ರಿಂದ ಸಂತೋ಼ಷಿ ಮಂಟಪದಲ್ಲಿ ರಾಜ್ಯ, ಅಂತರಾಜ್ಯ , ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಲಿವೆ.