ಮಂಗಳೂರು, ಮಾ. 14 (Daijiworld News/MB) : ಕೊರೊನಾ ವೈರಸ್ ಹಬ್ಬುತ್ತಿರುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಮಾಲ್, ಥಿಯೇಟರ್ಗಳನ್ನು ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ ಮಂಗಳೂರಿನಲ್ಲಿ ಜಿಲ್ಲಾಡಳಿತದ ಸೂಚನೆ ಇಲ್ಲವೆಂದು ಮಾಲ್ಗಳು ಹಾಗೂ ಫಿಲ್ಮ್ ಥಿಯೇಟರ್ ಕಾರ್ಯಾಚರಿಸಲು ಮುಂದಾಗಿದ್ದು ಮಾಲ್ಗಳು ತೆರೆದರೆ ಕಠಿಣ ಕ್ರಮಕ್ಕೆ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ತಿಳಿಸಿದ್ದಾರೆ.
ಮಂಗಳೂರಿನ ಯಾವ ಮಾಲ್ಗಳಿಗೂ ಈವರೆಗೆ ಮಾಲ್ನ್ನು ಮುಚ್ಚುವಂತೆ ನೋಟಿಸ್ ಸಿಗದ ಹಿನ್ನಲೆಯಲ್ಲಿ ಮಾಲ್ಗಳು ಕಾರ್ಯಚರಿಸಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಮಾಲ್ಗಳನ್ನು ಮುಚ್ಚುವಂತೆ ಸೂಚನೆ ನೀಡುವುದಾಗಿ ಜಿಲ್ಲಾಡಳಿತ ತಿಳಿಸಿದೆ.
ರಾಜ್ಯಾದ್ಯಂತ ಮಾಲ್, ಥಿಯೇಟರ್, ಶಾಲಾ ಕಾಲೇಜುಗಳು ಬಂದ್ ಮಾಡಲು ರಾಜ್ಯ ಸರ್ಕಾರ ಆದೇಶಿಸಿದ್ದು ಕೊರೊನ ಭೀತಿ ನಡುವೆಯೂ ಮಂಗಳೂರು ಸೆಂಟ್ರಲ್ ಮಾರ್ಕೆಟ್ನಲ್ಲಿ ವ್ಯಾಪಾರ ವಹಿವಾಟುಗಳು ನಡೆಯುತ್ತಿದೆ.