ಉಡುಪಿ, ಮಾ 14( Daijiworld News/MSP): ಇಂದಿನಿಂದ ಒಂದುವಾರ ರಾಜ್ಯದೆಲ್ಲೆಡೆ ಶಾಪಿಂಗ್ ಮಾಲ್ಸ್, ಥಿಯೇಟರ್, ರೆಸ್ಟೋರೆಂಟ್, ಕಾರ್ಯಕ್ರಮಗಳು ರದ್ದು ಪಡಿಸಲು ಆದೇಶ ನೀಡಲಾಗಿದ್ದರೂ ಉಡುಪಿಯಲ್ಲಿ ಮಾತ್ರ ಶಾಪಿಂಗ್ ಮಾಲ್ ಗಳು ಬೆಳೆಗ್ಗೆಯಿಂದಲೇ ಕಾರ್ಯನಿರ್ವಹಿಸುತ್ತಿವೆ. ಆದರೆ ಗ್ರಾಹಕರ ಸಂಖ್ಯೆ ಕಡಿಮೆಯಾದಂತೆ ಕಾಣುತ್ತಿದೆ.
ಉಡುಪಿಯ ಬ್ರಹತ್ ಶಾಪಿಂಗ್ ಮಾಲ್ ಗಳಾದ ಬಿಗ್ ಬಜಾರ್, ಸಿಟಿ ಸೆಂಟರ್ ಗಳು ತೆರೆದೇ ಇವೆ. ಕೆಲವರು ಜನರು ಒಂದು ವಾರವಿಡೀ ಮಾಲ್ ಗಳು ಬಂದ್ ಇರುತ್ತವೆ ಎನ್ನುವ ಕಾರಣಕ್ಕೆ ಇಂದು ಬೆಳಗ್ಗಿನಿಂದಲೇ ಜನ ಸಾಮಾನುಗಳ ಖರೀದಿಗೆ ಮುಗಿಬಿದ್ದಿದ್ದಾರೆ.ಇನ್ನು ದೇವಸ್ಥಾನದಲ್ಲಿಯೂ ಭಕ್ತರ ಸಂಖ್ಯೆಯೂ ಕಡಿಮೆ ಆದಂತೆ ತೋರುತ್ತಿದೆ.
ಇನ್ನು ಶಾಪ್ ಮಾಲಿಕರು ಸ್ವಲ್ಪ ಮಾಲ್ಗಳನ್ನು ಮುಚ್ಚುವ ಬಗ್ಗೆ ಗೊಂದಲದಲ್ಲಿದ್ದಾರೆ. ನಮಗೆ ಇನ್ನು ಜಿಲ್ಲಾಡಳಿತದಿಂದ ಯಾವುದೇ ಲಿಖಿತ ಆದೇಶ ಬಂದಿಲ್ಲ ಎಂದು ಹೇಳುತ್ತಾರೆ.
ಇದರ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ದಾಯ್ಜಿವಲ್ಡ್ ಗೆ ಪ್ರತಿಕ್ರಿಯಿಸಿದ್ದು ಈಗಾಗಲೇ ಮಾಲ್ ಗಳು ಥಿಯೇಟರ್, ರೆಸ್ಟೋರೆಂಟ್, ಮುಚ್ಚಿರುವಂತೆ ನೋಡಿಕೊಳ್ಳಲು ಆಧೇಶ ನೀಡಲಾಗಿದೆ ಎಂದರು.
ಇನ್ನು ಉಡುಪಿಯ ತಹಶಿಲ್ದಾರ್ ಪ್ರದೀಪ್ ಕುರ್ಡೆಕರ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಈಗಾಗಲೇ 'ಎಲ್ಲಾ ಮಾಲ್ ಗಳನ್ನು ಮಧ್ಯಾಹ್ನದೊಳಗೆ ಮುಚ್ಚವಂತೆ ಆದೇಶ ನೀಡಲಾಗಿದೆ' ಎಂದರು.