ಕುಂದಾಪುರ, ಫೆ 18 : ಕುಟುಂಬಸ್ಥರ ಮಾನಸಿಕ ಕಿರುಕುಳದಿಂದ ಬೇಸತ್ತು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಂಕರನಾರಾಯಣ ಠಾಣಾ ವ್ಯಾಪ್ತಿಯ ತೊನ್ನಾಸೆಯ ಅಲ್ಬಾಡಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ನ್ನ ಪ್ರಭಾಕರ ಆಚಾರ್ಯ ಎನ್ನಲಾಗಿದ್ದು, ತನ್ನ ತಂದೆ ನರಸಿಂಹ ಆಚಾರ್ಯ, ಚಿಕ್ಕಪ್ಪ ಶಂಕರ ಮತ್ತು ಇನ್ನೊರ್ವ ವ್ಯಕ್ತಿ ಶಂಕರ ಎನ್ನುವವರು ನೀಡಿದ ಮಾನಸಿಕ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮರಣ ಪತ್ರದಲ್ಲಿ ತಿಳಿಸಿದ್ದಾನೆ. ತಂದೆ ನರಸಿಂಹ ಆಚಾರ್ಯನನ್ನ ವಿಚಾರಣೆ ಉದ್ದೇಶಕ್ಕಾಗಿ ವಶಕ್ಕೆ ಪಡೆಯಲಾಗಿದ್ದು, ಇನ್ನಿಬ್ಬರನ್ನ ವಶಕ್ಕೆ ತೆಗೆದುಕೊಳ್ಳಬೇಕಾಗಿದೆ.
ಮೂರು ತಿಂಗಳ ಹಿಂದೆ ಹೆಂಡತಿ ಆತ್ಮಹತ್ಯೆ
ಮೃತ ಪ್ರಭಾಕರ ಆಚಾರ್ಯನ ಪತ್ನಿ ಮೂರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಹಿನ್ನೆಲೆ ಪ್ರಭಾಕರ ಆಚಾರ್ಯ ಬಂಧನಕ್ಕೊಳಗಾಗಿ ಸುಮಾರು ಒಂದು ತಿಂಗಳ ಬಿಡುಗಡೆಗೊಂಡಿದ್ದ. ಈ ಬಳಿಕ ಮನೆಯಲ್ಲಿ ತಂದೆ ಮತ್ತು ಚಿಕ್ಕಪ್ಪನಿಂದ ಬಹಳಷ್ಟು ನಿಂದನೆಯ ಮಾತುಗಳು ಕೇಳಿಬಂದಿದ್ದವು ಎನ್ನಲಾಗಿದ್ದು ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಈ ಕುರಿತು ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.