ಮಣಿಪಾಲ, ಮಾ 14 ( Daijiworld News/MSP) : ಕೊರೊನಾ ವೈರಸ್ ಏಕಾಏಕಿ ರಕ್ತದಾನದ ಮಾಡುವವರ ಮೇಲೆ ನಕಾರಾತ್ಮಕಪರಿಣಾಮ ಬೀರಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಕ್ರಮವಾಗಿ ನಿಗದಿತ ರಕ್ತದಾನ ಶಿಬಿರಗಳನ್ನು ರದ್ದುಪಡಿಸಲಾಗಿದೆ. ಇದರಿಂದಾಗಿ ರಕ್ತದಾನ ಮಾಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
ಈ ಹಿನ್ನೆಲೆಯಲ್ಲಿ ಹಾಗೂ ರಕ್ತದ ಬೇಡಿಕೆ ಹೆಚ್ಚುತ್ತಿರುವುದನ್ನು ಪರಿಗಣಿಸಿ ಅಗತ್ಯವಿರುವವರಿಗೆ ಸಹಾಯ ಮಾಡಲು ಆರೋಗ್ಯವಂತ ಸಾರ್ವಜನಿಕರಲ್ಲಿ ರಕ್ತದಾನ ಮಾಡಲು ವಿನಂತಿಸಲಾಗಿದೆ.
ರಕ್ತದಾನ ಸುರಕ್ಷಿತ ವಿಧಾನವಾಗಿದ್ದು, ರಕ್ತ ಮತ್ತು ರಕ್ತದ ಅಂಶಗಳು ಅಗತ್ಯವಿರುವ ರೋಗಿಗಳಿಗೆ ಸಹಾಯಮಾಡಲು ರಕ್ತದಾನಿಗಳ ಸಹಾಯಬೇಕು. ಕಸ್ತೂರ್ಬಾ ಆಸ್ಪತ್ರೆಯ ಅಪಘಾತ ಮತ್ತು ತುರ್ತುಚಿಕಿತ್ಸಾ ವಿಭಾಗದ ನೆಲಮಹಡಿಯಲ್ಲಿರುವ ರಕ್ತನಿಧಿ ಕೇಂದ್ರದಲ್ಲಿ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ರಕ್ತದಾನ ಮಾಡುವುದರ ಮೂಲಕ ರೋಗಿಗಳ ಜೀವಉಳಿಸುವುದಕ್ಕೆ ಸಹಾಯಮಾಡಬಹುದು. ಹೆಚ್ಚಿನಮಾಹಿತಿ ಬೇಕಾದಲ್ಲಿ 0820 2922331 ಕ್ಕೆ ಕರೆಮಾಡಬಹುದು ಎಂದು ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯಅಧೀಕ್ಷಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.