ಸುಳ್ಯ, ಮಾ. 15 (Daijiworld News/MB) : ಕೊರೊನಾ ವೈರಸ್ ಸೋಂಕಿಗೆ ಒಳಗಾದವರನ್ನು ಮತ್ತು ಶಂಕಿತರನ್ನು ಪರೀಕ್ಷಿಸಲು ಸುಳ್ಯ ಮತ್ತು ಕಡಬ ತಾಲೂಕು ಸರಕಾರಿ ಆಸ್ಪತ್ರೆಗಳಲ್ಲಿ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ 1, ಉಪ್ಪಿನಂಗಡಿಯಲ್ಲಿ 3 ಮತ್ತು ಕಡಬದಲ್ಲಿ 2 ಐಸೋಲೇಶನ್ ವಾರ್ಡ್ಗಳನ್ನು ಮೀಸಲು ಇಡಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಸುಳ್ಯ, ಉಪ್ಪಿನಂಗಡಿ, ಕಡಬ ಆಸ್ಪತ್ರೆಗಳಲ್ಲಿ ವಿಶೇಷ ಕೊಠಡಿಗಳು ಮತ್ತು ಬೆಡ್ಗಳ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೊಠಡಿಗಳಿಗೆ ಐಸೋಲೇಶನ್ ವಾರ್ಡ್ ಎಂದು ನಾಮಕರಣ ಮಾಡಲಾಗಿದೆ.
ವಾರ್ಡ್ನ ರೋಗಿಗಳ ಉಪಯೋಗಕ್ಕಾಗಿ ಒಂದು ಶೌಚಾಲಯ ಇದೆ. ಒಂದು ವಾಷ್ ಬೆಸಿನ್ ಇದೆ. ಇದಕ್ಕಾಗಿ ವಿಶೇಷ ತರಬೇತಿ ನೀಡಿದ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಆದರೆ ಈ ಸಿಬ್ಬಂದಿಗಳಿಗೆ ಬೇಕಾದ ಸುರಕ್ಷತಾ ವ್ಯವಸ್ಥೆ ಈ ತನಕ ಲಭ್ಯವಾಗಿಲ್ಲ ಎಂಬ ಆರೋಪವು ಕೇಳಿ ಬಂದಿದೆ.