ಕಾಸರಗೋಡು, ಮಾ.15 (Daijiworld News/MB) : ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಯ ಟ್ರಾನ್ಸ್ ಫಾರ್ಮರ್ಗೆ ಬಡಿದು ಮಗುಚಿ ಬಿದ್ದ ಘಟನೆ ಇಂದು ಬೆಳಿಗ್ಗೆ ಪೆರಿಯ ಮೂನಂ ಕಡವು ಎಂಬಲ್ಲಿ ನಡೆದಿದ್ದು , ಕ್ಲೀನರ್ ಮೃತಪಟ್ಟು , ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಮೃತಪಟ್ಟವರನ್ನು ತಮಿಳುನಾಡು ಪೊಳ್ಳಾಚ್ಚಿಯ ಮಣಿ (43) ಎಂದು ಗುರುತಿಸಲಾಗಿದೆ. ಚಾಲಕ ಶಕ್ತಿ ವೇಲು ಮತ್ತು ಕುಮಾರ್ ಎಂಬವರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಗುಚಿ ಬಿದ್ದ ಲಾರಿಯಡಿಯಲ್ಲಿ ಸಿಲುಕಿದ್ದ ಮೂವರನ್ನು ಗಂಟೆಗಳ ಶ್ರಮದ ಬಳಿಕ ಅಗ್ನಿಶಾಮಕ ಮತ್ತು ಪೊಲೀಸರು ಹೊರತೆಗೆದರೂ ಮಣಿ ಮೃತಪಟ್ಟಿದ್ದರು.
ಕುಂಡಂಗುಯಿ ಎಂಬಲ್ಲಿಗೆ ವಿದ್ಯುತ್ ಕಂಬವನ್ನು ಹೇರಿಕೊಂಡು ತೆರಳುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ನಡೆದಿದೆ. ಕಾರ್ಯಾಚರಣೆ ಸಂದರ್ಭದಲ್ಲಿ ಲಾರಿಯಲ್ಲಿದ್ದ ವಿದ್ಯುತ್ ಕಂಬಗಳು ತೆರವುಗೊಳಿಸುತ್ತಿದ್ದಾಗ ಬಿದ್ದು ಅಗ್ನಿಶಾಮಕ ದಳದ ಇಬ್ಬರು ಸಿಬ್ಬಂದಿಗಳು ಗಾಯಗೊಂಡಿದ್ದಾರೆ.