ಕುಂದಾಪುರ, ಮಾ 16 ( Daijiworld News/MSP): ವಿವಾಹಿತ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕುಂದಾಪುರದ ಕೋಡಿ ಬೀಚ್ ಹಳೆ ಅಳಿವೆ ಎಂಬಲ್ಲಿ ನಡೆದಿದೆ. ಬೆಂಗಳೂರುನ ಗಿರಿನಗರ ನಿವಾಸಿಗಳಾದ ರಮೇಶ್ (45) ಹಾಗೂ ಪವಿತ್ರಾ(35) ವಿಷ ಸೇವಿಸಿದವರು. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಇನ್ನು ಪವಿತ್ರಾ ಅವರ ಮನೆಯವರು ಆಗಮಿಸಿ ಅವರನ್ನು ಕುಂದಾಪುರದಿಂದ ವೆನ್ಲಾಕ್ ಗೆ ಸ್ಥಳಾಂತರಿಸಿದ್ದಾರೆ.
ಘಟನೆಯ ವಿವರ: ಇಬ್ಬರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹನುಮಂತ ನಗರದ ನಿವಾಸಿಗಳಾಗಿದ್ದು ಇನ್ನೋವಾ ಕಾರ್ ನಲ್ಲಿ ಇಲ್ಲಿಗೆ ಬಂದಿದ್ದರು. ಭಾನುವಾರ ಮುಂಜಾನೆ ೫ ಗಂಟೆಗೆ ಹಳೆ ಅಳಿವೆ ಕಡಲ ಕಿನಾರೆಯಲ್ಲಿ ಪುರುಷ ಮತ್ತು ಮಹಿಳೆ ಒದ್ದಾಡುತ್ತಿರುವುದನ್ನು ಕಂಡ ಸ್ಥಳೀಯರು ಸಮಾಜಸೇವಕಿ ಜಾನಕಿ ಬಿಲ್ಲವ ಅವರು ಮಾಹಿತಿ ನೀಡಿದ್ದು ಅವರು ಪೊಲೀಸರಿಗೆ ಮಾಹಿರಿ ನೀಡಿದ್ದಾರೆ. ಪೊಲೀಸರು ತಕ್ಷಣ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದರೂ ಕೊರೊನಾ ಭಯದಿಂದ ಯಾರೂ ಆಸ್ಪತ್ರೆಗೆ ದಾಖಲಿಸಲು ಮುಂದಾಗಲಿಲ್ಲ. ಕೆಲ ಸಮಯದ ಬಳಿಕ ಸ್ಥಳೀಯ ಆಸ್ಪತೆಗೆ ದಾಖಲಿಸಲಾಯಿತು.
ವಿಳಾಸ ಪತ್ತೆಗಾಗಿ ಅವರ ಅವರ ಕೈಯ್ಯಲ್ಲಿದ್ದ ಮೊಬೈಲ್ ಹಾಗೂ ದಾಖಲೆ ಪತ್ರಗಳ ಮೂಲಕ ಪ್ರಾಥಮಿಕ ಮಾಹಿತಿ ಪೊಲೀಸರು ಕಲೆ ಹಾಕಿದ್ದಾರೆ. ಈ ವೇಳೆ ಇವರಿಬ್ಬರೂ ವಿವಾಹಿತರಾಗಿದ್ದು ಪವಿತ್ರಾ ಅವರಿಗೆ ಗಂಡ ಮತ್ತು ಇಬ್ಬರು ಮಕ್ಕಳಿದ್ದಾರೆ. ರಮೇಶ್ ಅವರಿಗೆ ಸಂಸಾರವಿದೆ. ಇವರಿಬ್ಬರೂ ಕೆಲ ಸಮಯದಿಂದ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ.
ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.