ಕಾಸರಗೋಡು, ಮಾ 16 ( Daijiworld News/MSP): ಕೇರಳ ರಾಜ್ಯದ ಹಲವೆಡೆ ಮಂಗನ ಕಾಯಿಲೆ ಕಂಡುಬಂದ ಹಿನ್ನಲೆಯಲ್ಲಿ ನಿಯಂತ್ರಣದ ಬಗ್ಗೆ ಚರ್ಚಿಸಲು ರಾಜ್ಯ ಕಂದಾಯ ಸಚಿವ ಇ . ಚಂದ್ರಶೇಖರನ್ ಅಧ್ಯಕ್ಷತೆಯಲ್ಲಿ ಪರಪ್ಪ ಬ್ಲಾಕ್ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಯಿತು.
ಮಂಗನ ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಎಲ್ಲಾ ಕ್ರಮ ತೆಗೆದುಕೊಂಡಿದೆ. ರಾಜ್ಯ ಹಾಗೂ ನೆರೆ ರಾಜ್ಯದ ಹಲವೆಡೆ ಹಲವರಲ್ಲಿ ಕಾಯಿಲೆ ಕಂಡುಬಂದಿದೆ. ಜಿಲ್ಲೆಯ ಕೆಲವೆಡೆ ಮಂಗಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು . ಈ ಹಿನ್ನಲೆಯಲ್ಲಿ ಕಾಯಿಲೆ ಹರಡದಂತೆ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು .
ಆರೋಗ್ಯ ಇಲಾಖೆ , ಮೃಗ ಸಂರಕ್ಷಣಾ ಇಲಾಖೆ , ಅರಣ್ಯ ಇಲಾಖೆ ನೇತೃತ್ವದಲ್ಲಿ ಜಂಟಿ ಸಮಿತಿ ರೋಗ ನಿಯಂತ್ರಣಕ್ಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು , ಇದರ ಜೊತೆಗೆ ಜನರಿಗೆ ತಿಳುವಳಿಕೆ ಮೂಡಿಸಲಾಗುವುದು. ಈ ಬಗ್ಗೆ ಕ್ರಿಯಾ ಸಮಿತಿ ರಚಿಸಲು ತೀರ್ಮಾಯಿಸಲಾಯಿತು .
ಮಂಗಗಳು ಸಾವನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಜಿಲ್ಲೆಯ ಕರಿಂದಲ ಗ್ರಾಮ ಪಂಚಾಯತ್ ನಲ್ಲಿ ಜಾಗೃತಿ ಮೂಡಿಸಲು ಸಭೆ ತೀರ್ಮಾನಿಸಲಾಯಿತು .