ಸುಬ್ರಹ್ಮಣ್ಯ, ಮಾ.17 (Daijiworld News/MB) : ಕೊರೊನಾ ಮುನ್ನೆಚ್ಚರಿಕೆ ಕ್ರಮಕ್ಕಾಗಿ ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ಪೂಜಾ ಸೇವೆಗಳನ್ನು ಮುಂದೂಡಿಕೆ ಮಾಡಲಾಗಿದೆ. ಒಂದು ವಾರಗಳ ಕಾಲ ಸುಬ್ರಹ್ಮಣ್ಯ ಮಠದಲ್ಲಿ ಸರ್ಪಸಂಸ್ಕಾರ ಸೇರಿದಂತೆ ಸೇವೆಗಳು ಮುಂದೂಡಿಕೆ ಮಾಡಲಾಗಿದೆ ಎಂದು ಸುಬ್ರಹ್ಮಣ್ಯ ಮಠಾಧಿಪತಿ ಶ್ರೀ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿಗಳು ಹೇಳಿದ್ದಾರೆ.
ಸುಬ್ರಹ್ಮಣ್ಯ ಮಠದ ವತಿಯಿಂದ ನಡೆಯುವ ಎಲ್ಲಾ ಸೇವೆಗಳು ಮುಂದೂಡಿಕೆ ಮಾಡಲಾಗಿದೆ.
ಮಾ.18 ರಿಂದ ಒಂದು ವಾರಗಳ ಕಾಲ ಎಲ್ಲಾ ಸೇವೆಗಳನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ನರಸಿಂಹಸ್ವಾಮಿ ಮಠಾಧಿಪತಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ಹೇಳಿಕೆ ನೀಡಿದ್ದಾರೆ.
ಇದು ಭೀತಿ ಹುಟ್ಟಿಸುವ ಸಲುವಾಗಿ ಅಲ್ಲ, ಬದಲಾಗಿ ಮುನ್ನೆಚ್ಚರಿಕೆ ಸಲುವಾಗಿ ಎಂದೂ ಅವರು ಹೇಳಿದ್ದಾರೆ.