ಕಾಸರಗೋಡು, ಮಾ 17 ( Daijiworld News/MSP): ಕಾಸರಗೋಡಿನಲ್ಲಿ ಕೊರೊನಾ ಸೋಂಕು ಪತ್ತೆಯಾದ ಯುವಕನ ಓಡಾಡಿದ ಸ್ಥಳದ ಬಗ್ಗೆ ಜಿಲ್ಲಾಡಳಿತ ರೂಟ್ ಮ್ಯಾಪ್ ತಯಾರಿಸಿದ್ದು , ಯುವಕ ಮಂಗಳೂರು ವಿಮಾನ ನಿಲ್ದಾಣದಿಂದ ಇಳಿದು ಮನೆ ತನಕ ಬಂದಿರುವ ಮಾಹಿತಿಯನ್ನು ಜಿಲ್ಲಾಡಳಿತ ಬಿಡುಗಡೆಗೊಳಿಸಿದೆ.
ಮಾರ್ಚ್ 14ರಂದು ಮುಂಜಾನೆ 5.20 ಕ್ಕೆ ಸೋಂಕಿತ ಯುವಕ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು ಅಲ್ಲಿಂದ ಏಳು ಗಂಟೆ ಸುಮಾರಿಗೆ ಯುವಕನನ್ನು ಕರೆದೊಯ್ಯಲೂ ಕಾಸರಗೋಡಿನಿಂದ ತೆರಳಿದ ಸಂಬಂಧಿಕರು ನಿಲ್ದಾಣಕ್ಕೆ ತಲುಪಿದ್ದು , ಬಳಿಕ ಖಾಸಗಿ ಕಾರಿನಲ್ಲಿ ಅಲ್ಲಿಂದ ಹೊರಟು ಕಾಸರಗೋಡಿಗೆ ತಲಪುತ್ತಾರೆ. ಮಂಗಳೂರಿನಿಂದ ಕಾಸರಗೋಡಿನ ದಾರಿ ಮಧ್ಯೆ ಎಲ್ಲಿಯೂ ಕಾರು ನಿಲ್ಲಿಸಿರುವುದಿಲ್ಲ.
ಕಾಸರಗೋಡಿನಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಿ ತಪಾಸಣೆ ನಡೆಸಿ ರಕ್ತದ ಮಾದರಿಯನ್ನು ತಪಾಸಣೆಗೆ ನೀಡುತ್ತಾರೆ. ಅಲ್ಲಿಂದ ಎಂಟು ಗಂಟೆಗೆ ಸ್ನೇಹಿತರು ಸೇರಿದಂತೆ ನಾಲ್ವರ ಜೊತೆ ಇನ್ನೊಂದು ಆಸ್ಪತ್ರೆಯ ಕ್ಯಾಂಟಿನ್ ತೆರಳಿ ಆಹಾರ ಸೇವಿಸುತ್ತಾರೆ.
ಬಳಿಕ ಸರಕಾರಿ ಜನರಲ್ ಆಸ್ಪತ್ರೆಗೆ ಬಂದು ವಿದೇಶದಿಂದ ಬಂದಿರುವುದಾಗಿ ಮಾಹಿತಿ ನೀಡುತ್ತಾರೆ . ಮಧ್ಯಾಹ್ನ ಒಂದು ಗಂಟೆಗೆ ಬೇವಿಂಜೆ ಯಲ್ಲಿರುವ ಸಂಬಂಧಿಕರ ಮನೆಗೆ ತೆರಳುತ್ತಾರೆ. 1.30 ಕ್ಕೆ ತನ್ನ ಮನೆಗೆ ತಲಪುತ್ತಾರೆ . ಮನೆಯಲ್ಲಿ ಮೂರು ದಿನ ನಿಗಾ ದಲ್ಲಿ ಕಳೆಯುತ್ತಿದ್ದು , ಸೋಮವಾರ ರಾತ್ರಿ ಬಂದ ವೈದ್ಯಕೀಯ ಪರೀಕ್ಷೆಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು , ಯುವಕನನ್ನು ಆಸ್ಪತೆಯ ವಿಶೇಷ ವಾರ್ಡ್ ಗೆ ದಾಖಲಿಸಲಾಗಿ ಚಿಕಿತ್ಸೆ ಪ್ರಾರಂಭಿಸಲಾಗಿತ್ತು.